ಒಗ್ಗಟ್ಟಿನಿಂದಲೇ ಕೊರೋನಾಗೆ ಬ್ರೇಕ್

ಒಗ್ಗಟ್ಟಿನಿಂದಲೇ ಕೊರೋನಾಗೆ ಬ್ರೇಕ್

ಬೊಮ್ಮನಹಳ್ಳಿ;ಏ,8: ಕೊರೋನಾ ವೈರಸ್ ತನ್ನ ಅಟ್ಟಹಾಸವನ್ನು ಜಗತ್ತಿನ ಹಲವಾರು ದೇಶಗಳಲ್ಲಿ ಬೀರುತ್ತಿದ್ದ ಅಕ್ಷರಶಃ ಸ್ಮಶಾನ ಮೌನ ಎಲ್ಲೆಡೆಯೂ ಆವರಿಸಿದೆ. ಕೊರೋನಾ ಬಗ್ಗೆ ಜಾಗೃತಗೊಂಡಿರುವ ದೇಶಗಳಲ್ಲಿಯೇ “ಭಾರತ” ಒಂದು ಹೆಜ್ಜೆ ಮುಂದಿದೆ ಎಂದರೆ ತಪ್ಪಾಗಲಾರದು. ನಮ್ಮಲ್ಲಿರುವ ಒಗ್ಗಟ್ಟಿನ ಗುಟ್ಟೇ ಇಂದು ಕೊರೋನಾ ಹರಡುವಿಕೆಯನ್ನು ತಡೆಯಲು ಸಾಧ್ಯವಾಗುತ್ತಿದೆ ಎಂದು ಶಾಸಕ ಎಂ. ಸತೀಶ್ ರೆಡ್ಡಿ ನುಡಿದರು.
ಸಿಂಗಸAದ್ರ, ಎಇಸಿಎಸ್ “ಎ” ಮತ್ತು “ಬಿ” ಬ್ಲಾಕ್‌ನ ನಿವಾಸಿಯಾಗಿರುವ ಜಯಪ್ಪ ಮತ್ತು ಕುಟುಂಬಸ್ಥರು ಕೋವಿಡ್ ೧೯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ೨ ಲಕ್ಷ ಹಾಗೂ ಪ್ರಧಾನಿ ಪರಿಹಾರ ನಿಧಿಗೆ ೧ ಲಕ್ಷ ನೀಡುವ ಮೂಲಕ ಅನೇಕ ಕುಟುಂಬಗಳ ಹಿತ ಕಾಯುವ ಕಾಯಕ ಕೈಗೊಂಡಿದ್ದಾರೆ. ರುದ್ರ ನರ್ತನ ಮಾಡುತ್ತಿರುವ ಕೋವಿಡ್ ೧೯ ನಿಂದ ಅನೇಕ ಕುಟುಂಬಗಳ ಸದಸ್ಯರು ಪ್ರಾಣ ತೆತ್ತಿದ್ದಾರೆ. ರೋಗಪೀಡಿತರು ಕ್ವಾರಂಟೈನ್‌ನಲ್ಲಿದ್ದಾರೆ. ವಿಶ್ವದ ಹಲವಾರು ದೇಶಗಳು ತತ್ತರಿಸಿ ಹೋಗಿವೆ. ಆದರೆ ಭಾರತ ಮಾತ್ರ ಕೊರೋನಾ ಹರಡದಂತೆ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುತ್ತಿದೆ. ಕೊರೋನಾ ಭಾರತದಲ್ಲಿ ನಿಯಂತ್ರಣದಲ್ಲಿದೆ. ಏಪ್ರಿಲ್ ೧೪ ರವರೆಗೆ ಜಾರಿಯಲ್ಲಿದ್ದು ಅನಗತ್ಯವಾಗಿ ಜನ ಹೊರಗಡೆ ತಿರುಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದರು. ವಿಶ್ವದ ಹಲವು ದೇಶಗಳನ್ನು ಹೋಲಿಸಿ ನೋಡಿದಾಗ ನಮ್ಮಲ್ಲಿ ಕೊರೋನಾ ಸೋಂಕಿನಿAದ ಸತ್ತವರ ಸಂಖ್ಯೆಯೂ ವಿರಳವಾಗಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಏರುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos