ಬ್ರಾಂಡ್‌ ಬೆಂಗಳೂರು ಅಲ್ಲಾ ಗುಂಡಿ ಬೆಂಗಳೂರು!!

ಬ್ರಾಂಡ್‌ ಬೆಂಗಳೂರು ಅಲ್ಲಾ ಗುಂಡಿ ಬೆಂಗಳೂರು!!

ಬೆಂಗಳೂರು: ಬೆಂಗಳೂರಿನ ರಸ್ತೆಯಲ್ಲಿ ಹೋರಾಡ್ತಾ ಇದ್ರೆ ಎಲ್ಲಿ ಯಾವ ಗುಂಡಿಯಲ್ಲಿ ಬಿದ್ದು ನಮ್ಮ ಜೀವ ಅಪಾಯ ಬಂದುಬಿಡುತ್ತೋ ಅನ್ನೋ ಆತಂಕದಲ್ಲೇ ಬೆಂಗಳೂರಿನ ರಸ್ತೆಯಲ್ಲಿ ದಿನನಿತ್ಯ ಸಂಚಾರ ಮಾಡುವಂತಹ ಸ್ಥಿತಿ ನಮ್ಮದಾಗಿದೆ. ಯಾಕಂದ್ರೆ ಬ್ರಾಂಡ್ ಬೆಂಗಳೂರು ಮಾಡ್ತೀನಿ ಅಂತ ಹೊರಟಿದ್ದಾರೆ. ಮೊದಲು ರಸ್ತೆಯಲ್ಲಿ ಬಿದ್ದಿರುವಂತ ಗುಂಡಿಗಳನ್ನು ಮುಚ್ಚಬೇಕು. ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಸಹ ಗುಂಡಿಗಳಿಗೆ ಮುಕ್ತಿ ಸಿಕ್ಕಿಲ್ಲ.

ಬರಿ ಬಾಯಿ ಮಾತಿಗೆ ಮಾತ್ರ ಸೀಮಿತವಾದಂತಹ ಬ್ರಾಂಡ್ ಬೆಂಗಳೂರು. ನವೆಂಬರ್ ಅಂತ್ಯಕ್ಕೆ ಗುಂಡಿ ಮುಕ್ತ ಮಾಡ್ತೀವಿ ಅಂತ ಹೇಳಿದ್ರು. ಡಿಸಿಎಂ ಶಿವಕುಮಾರ್ ಅವರು ಬಿಬಿಎಂಪಿ ಅಧಿಕಾರಿಗಳ ಕಣ್ಣಿಗೆ ಕಾಣ್ತಾ ಇಲ್ವಾ. ಡಿಸಿಎಂ ಶಿವಕುಮಾರ್ ಅವರು ಹೇಳಿಕೆಯನ್ನು ನೀಡಿದ್ದರು ನವೆಂಬರ್ ಕೊನೆಯಲ್ಲಿ ಬೆಂಗಳೂರಿನಲ್ಲಿ ಎಲ್ಲ ಗುಂಡಿಗಳು ಮುಚ್ಚಿರುತ್ತೇವೆ. ನಾವು ಬ್ರಾಂಡ್ ಬೆಂಗಳೂರನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದರು. ನವೆಂಬರ್ ಮುಗಿದು ಡಿಸೆಂಬರ್ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇದ್ದು ಇನ್ನೇನು ಹೊಸ ವರ್ಷವು ಸಹ ಆರಂಭವಾಗುತ್ತಿದೆ. ಇಷ್ಟಾದರೂ ಸಹ ಬೆಂಗಳೂರಿನಲ್ಲಿರುವ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ.

ಫ್ರೆಶ್ ನ್ಯೂಸ್

Latest Posts

Featured Videos