ಬಿಪಿಎಲ್ ಕಾರ್ಡ್! ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ

ಬಿಪಿಎಲ್ ಕಾರ್ಡ್! ಹೊಸ ಅರ್ಜಿ ಸಲ್ಲಿಕೆಗೆ ಅವಕಾಶ

ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿಆಹಾರ ಇಲಾಖೆಯಿಂದ ಬಿಪಿಎಲ್ ಕಾರ್ಡ್ ಹೊಸ ಅರ್ಜಿ ಸಲ್ಲಿಕೆಗೆ ಅವಕಾಶವಿರಲಿಲ್ಲ ಏಕೆಂದರೆ ಇನ್ನೂ ಹಳೆ ಕಾರ್ಡ್ ಗಳು ಮುದ್ರಣವಾಗಿರಲಿಲ್ಲ. ಬಿಪಿಎಲ್ ಕಾರ್ಡ್ದಾರರಿಗೆ ಆಹಾರ ಗುಡ್ ನ್ಯೂಸ್ ನೀಡುವ ಸುಳಿವು ನೀಡಿದೆ. ಶೀಘ್ರದಲ್ಲೇ ಹೊಸ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸಲ್ಲಿಕೆಯಾಗಿರುವ 3 ಲಕ್ಷ ಎಪಿಎಲ್ ಕಾರ್ಡ್ ಅರ್ಜಿಗಳಲ್ಲಿ ಶೇ 75ರ ದೃಢೀಕರಣ ಪೂರ್ಣಗೊಂಡಿದೆ. ಸದ್ಯದಲ್ಲೆ ಈ ಕಾರ್ಡ್ಗಳನ್ನು ವಿತರಣೆ ಮಾಡುವ ಸಾಧ್ಯತೆ ಇದೆ.
ಬಿಪಿಎಲ್ ಕಾರ್ಡ್ನಲ್ಲಿ ಪುರುಷರು ಮುಖ್ಯಸ್ಥರಾಗಿದ್ದರೆ ಗೃಹಲಕ್ಷ್ಮೀ ಯೋಜನೆಯಿಂದ ಆ ಕುಟುಂಬದ ಮಹಿಳೆಯರು ವಂಚಿತರಾಗಬೇಕಾಗುತ್ತದೆ. ಈ ಕಾರಣಕ್ಕೆ ಮನೆ ಮುಖ್ಯಸ್ಥರ ಹೆಸರು ಬದಲಾವಣೆಗೆ ಸೆಪ್ಟೆಂಬರ್ 1ರಿಂದ ಸರ್ಕಾರ ಅನುಮತಿ ನೀಡಿತ್ತು. ನಿಯಮದ ಪ್ರಕಾರ ಬಿಪಿಎಲ್ ಕಾರ್ಡ್ ನಲ್ಲಿ ಮಹಿಳೆಯರೇ ಮುಖ್ಯಸ್ಥರಿರಬೇಕು. ಮಹಿಳಾ ಮುಖ್ಯಸ್ಥರಿದ್ದರೆ ಮಾತ್ರ ಬಿಪಿಎಲ್ ಸೌಲಭ್ಯ ದೊರೆಯಲಿದೆ. ಆದ್ರೆ, ಆಹಾರ ಇಲಾಖೆಯ ಪ್ರಕಾರ 6 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಪುರುಷ ಮುಖ್ಯಸ್ಥ ಕಾರ್ಡ್ ದಾರರು ಇದ್ದಾರೆ ಎಂಬುದು ದಾಖಲೆಗಳಿಂದ ತಿಳಿದುಬಂದಿತ್ತು. ಹೀಗಾಗಿ ಸರ್ಕಾರ ತಿದ್ದುಪಡಿಗೆ ಅವಕಾಶ ನೀಡಿತ್ತು.

ಫ್ರೆಶ್ ನ್ಯೂಸ್

Latest Posts

Featured Videos