ಮೋಸ ಹೋದ ಮಹಿಳೆ ಮಾಡಿದಳು ‘ಬಾಯ್ ಫ್ರೆಂಡ್ ಬಿರಿಯಾನಿ’!

ಮೋಸ ಹೋದ ಮಹಿಳೆ ಮಾಡಿದಳು ‘ಬಾಯ್ ಫ್ರೆಂಡ್ ಬಿರಿಯಾನಿ’!

ಯುಎಇ, ಏ. 26, ನ್ಯೂಸ್ ಎಕ್ಸ್ ಪ್ರೆಸ್: ಇತ್ತೀಚಿನ ದಿನಗಳಲ್ಲಿ ಚಿತ್ರವಿಚಿತ್ರ ಅಪರಾಧ ಪ್ರಕರಣಗಳು ಬೆಳಕಿಗೆ ಬರ್ತಿರುತ್ತವೆ. ಪ್ರೀತಿಯಲ್ಲಿ ಮೋಸ ಹೋದ ವ್ಯಕ್ತಿ ಮನಸ್ಥಿತಿ ಹೇಗಿರುತ್ತದೆ ಎಂಬುದು ಈ ಘಟನೆಯಿಂದ ಸ್ಪಷ್ಟವಾಗುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್ನ ಅಲ್ ಇನ್ ನಗರದಲ್ಲಿ ನಡೆದಿದೆ. ಮಹಿಳೆ ಮೂಲತಃ ಮೊರಾಕೊದವಳು. ಯುನೈಟೆಡ್ ಅರಬ್ ಎಮೀರೇಟ್ಸ್ ನಲ್ಲಿ ವಾಸವಾಗಿದ್ದಾಳೆ.  30 ವರ್ಷದ ಫಾತಿಮಾ ಅಬ್ದುಲ್ಲಾನನ್ನು ಪ್ರೀತಿ ಮಾಡ್ತಿದ್ದಳಂತೆ. ಆದ್ರೆ ಅಬ್ದುಲ್ಲಾ ಬೇರೆ ಹುಡುಗಿ ಜೊತೆ ಸಂಬಂಧ ಹೊಂದಿರುವ ಸಂಗತಿ ಗೊತ್ತಾಗಿದೆ. ಇದ್ರಿಂದ ಕೋಪಗೊಂಡ ಮಹಿಳೆ, ಅಬ್ದುಲ್ಲಾನನ್ನು ಮನೆಗೆ ಕರೆದಿದ್ದಾಳೆ. ಆತನ ಹತ್ಯೆಗೈದು ಶವವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿದ್ದಾಳೆ. ನಂತ್ರ ಬಿರಿಯಾನಿ ತಯಾರಿಸಿ ಕೆಲಸ ಮಾಡ್ತಿದ್ದ ಕಾರ್ಮಿಕರಿಗೆ ನೀಡಿದ್ದಾಳೆ. ಉಳಿದ ಶವದ ತುಂಡುಗಳನ್ನು ಮಿಕ್ಸಿಗೆ ಹಾಕಿ ರುಬ್ಬಿದ್ದಾಳೆ. ಈ ಸಂಗತಿಯನ್ನು ಮಹಿಳೆ ಕೋರ್ಟ್ ಮುಂದೆ ಒಪ್ಪಿಕೊಂಡಿದ್ದಾಳೆ. ಬಾಯ್ ಫ್ರೆಂಡ್ ಶವದಲ್ಲಿ ಬಿರಿಯಾನಿ ಮಾಡಿದ್ದೆ ಎಂದಿದ್ದಾಳೆ.

ಫ್ರೆಶ್ ನ್ಯೂಸ್

Latest Posts

Featured Videos