ಬಾಕ್ಸಿಂಗ್ ಅಖಾಡದಿಂದ ಚುನಾವಣಾ ಅಖಾಡಕ್ಕೆ ಬಾಕ್ಸರ್ ವಿಜೇಂದ್ರ ಸಿಂಗ್!

ಬಾಕ್ಸಿಂಗ್ ಅಖಾಡದಿಂದ ಚುನಾವಣಾ ಅಖಾಡಕ್ಕೆ ಬಾಕ್ಸರ್ ವಿಜೇಂದ್ರ ಸಿಂಗ್!

ನವದೆಹಲಿ, ಏ. 23, ನ್ಯೂಸ್ ಎಕ್ಸ್ ಪ್ರೆಸ್ :  ದೆಹಲಿಯಲ್ಲಿ ಮಾಜಿ ಕ್ರಿಕೆಟರ್‌ ಗೌತಮ್ ಗಂಭೀರ್‌ ಬಿಜೆಪಿ ಪಾಳಯ ಸೇರಿಕೊಂಡಿದ್ದಾರೆ. ಈಗ ಕಾಂಗ್ರೆಸ್‌ ಕೂಡ ಭಾರತದ ಬಾಕ್ಸಿಂಗ್‌ ಐಕಾನ್‌ ವಿಜೇಂದ್ರ ಸಿಂಗ್​​ಗೆ ಮಣೆ ಹಾಕಿದೆ. ಆ ಮೂಲಕ ಬಿಜೆಪಿ ತಂತ್ರಕ್ಕೆ ದೆಹಲಿಯಲ್ಲಿ ಕಾಂಗ್ರೆಸ್‌ ಪ್ರತಿತಂತ್ರ ರೂಪಿಸಿದೆ. ವೃತ್ತಿಪರ ಬಾಕ್ಸಿಂಗ್‌ನಲ್ಲೂ ವಿಶ್ವದ ದಿಗ್ಗಜ ಪ್ಲೇಯರ್‌ಗಳನ್ನ ಈಗಾಗಲೇ ಮಣಿಸಿರುವ ವಿಜೇಂದ್ರ ಸಿಂಗ್, ರಾಜಕೀಯದಲ್ಲೂ ಎದುರಾಳಿಗೆ ಪಂಚ್ ಕೊಡಲು ಸಿದ್ಧವಾಗಿದ್ದಾರೆ. ದೆಹಲಿಯ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ವಿಜೇಂದ್ರ ಅವರನ್ನ ಕಾಂಗ್ರೆಸ್‌ ಕಣಕ್ಕಿಳಿಸುತ್ತಿದೆ. ‘ಬಾಕ್ಸಿಂಗ್‌ ಕೆರಿಯರ್‌ಗಾಗಿ ನಾನು 20 ವರ್ಷ ಕಳೆದಿರುವೆ ‘, ಬಾಕ್ಸಿಂಗ್‌ ರಿಂಗ್‌ನಲ್ಲಿ ದೇಶ ಹೆಮ್ಮೆ ಪಡುವಂತೆ ಪ್ರದರ್ಶನ ನೀಡಿರುವೆ. ಈಗ ದೇಶಕ್ಕಾಗಿ, ಜನರಿಗಾಗಿ ಏನಾದರೂ ಒಳ್ಳೇ ಸೇವೆ ಮಾಡಬೇಕಿದೆ. ಕಾಂಗ್ರೆಸ್‌ ನೀಡಿರುವ ಅವಕಾಶ ಸ್ವೀಕರಿಸಿರುವೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿಯವರಿಗೆ ಧನ್ಯವಾದ ಅರ್ಪಿಸುವೆ’ ಅಂತಾ ರಾಜಕೀಯಕ್ಕೆ ಪದಾರ್ಪಣೆ ಮಾಡ್ತಿರುವ ವಿಜೇಂದ್ರ ಸಿಂಗ್‌ ಟ್ವೀಟ್‌ಮಾಡಿದ್ದಾರೆ. ಭಾರತದಲ್ಲಿ ಬಾಕ್ಸಿಂಗ್‌ ಪಾಪ್ಯುಲಾರಿಟಿ ಪಡೆಯಲು ಕಾರಣ ವಿಜೇಂದ್ರ ಸಿಂಗ್‌. ಬಾಕ್ಸಿಂಗ್‌ ಕ್ರೀಡೆಯಲ್ಲಿನ ಸಾಧನೆಗಾಗಿ 2010ರಲ್ಲಿ ದೇಶದ 3ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ನೀಡಿ ವಿಜೇಂದ್ರ ಅವರನ್ನ ಸರ್ಕಾರ ಗೌರವಿಸಿದೆ. ವಿಜೇಂದ್ರ ಅವರಿಗೆ ಬಾಕ್ಸಿಂಗ್‌ನಲ್ಲಿ ಮೊದಲಿಗೆ ಒಲಿಂಪಿಕ್‌ ಪದಕ ಗೆದ್ದು ಕೊಟ್ಟ ಕೀರ್ತಿ ಸಲ್ಲುತ್ತೆ.

ಫ್ರೆಶ್ ನ್ಯೂಸ್

Latest Posts

Featured Videos