ಬಾಕ್ಸ್ ಆಫಿಸ್ ನುಲ್ತಾನ್ – ಕಬೀರ್ ಸಿಂಗ್

ಬಾಕ್ಸ್ ಆಫಿಸ್ ನುಲ್ತಾನ್ – ಕಬೀರ್ ಸಿಂಗ್

ಮುಂಬೈ, ಜು. 13:  ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಶಾಯಿದ್ ಕಪೂರ್ ಅಭಿನಯದ ಹಿಂದಿ ಚಿತ್ರ ‘ಕಬೀರ್ ಸಿಂಗ್ ‘ ಜೂನ್ 21 ರಂದು ಈ ಚಿತ್ರ ಬಿಡುಗಡೆಯಾಗಿತ್ತು. ಬಿಡುಗಡೆಯಾದ ನಾಲ್ಕು ವಾರಗಳಲ್ಲಿ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಈ ವರ್ಷದ ಬಾಕ್ಸ್ ಆಫಿಸ್ ಸುಲ್ತಾನ್ ಎನಿಸಿಕೊಂಡಿದೆ.
ಕಬೀರ್ ಸಿಂಗ್ ಚಿತ್ರ ಒಟ್ಟಾರೇ 252. 14 ಕೋಟಿ ಕಲೆಕ್ಷನ್ ಮಾಡುವ ಮೂಲಕ 250 ಕೋಟಿ ಕ್ಲಬ್ ಸೇರಿದೆ. ಶಾಯಿದ್ ಕಪೂರ್ ಅಭಿಯನದ ಈ ಚಿತ್ರ ಬಿಡುಗಡೆಯಾದ ಮೊದಲ ದಿನವೇ 20.21 ಕೋಟಿ ಕಲೆಕ್ಷನ್ ಮಾಡಿತ್ತು. ಭಾರತೀಯ ಚಿತ್ರೋದ್ಯಮ ವಿಶ್ಲೇಷಕ ತರುಣ್ ಆದರ್ಶ್ ಟ್ವೀಟರ್ ನಲ್ಲಿ ಕಬೀರ್ ಸಿಂಗ್ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇತ್ತೀಚಿಗೆ ಬಿಡುಗಡೆಯಾದ ‘ಸೂಪರ್ 30’ ಅರ್ಟಿಕಲ್ 15 ಚಿತ್ರಗಳ ತೀವ್ರ ಪೈಪೋಟಿಯ ನಡುವೆಯೂ ಕಬೀರ್ ಸಿಂಗ್ ಚಿತ್ರ ಉತ್ತಮ ಆದಾಯ ಮಾಡಿದೆ. ಈ ಸಿನಿಮಾ 200 ಕೋಟಿ ಕ್ಲಬ್ ಸೇರಿರುವುದಕ್ಕೆ ಶಾಯಿದ್ ಕಪೂರ್ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos