ಜವಾನ್ ಅಬ್ಬರಕ್ಕೆ ಬಾಕ್ಸ್‌ ಆಫೀಸ್‌ ಧೂಳಿಪಟ

ಜವಾನ್ ಅಬ್ಬರಕ್ಕೆ ಬಾಕ್ಸ್‌ ಆಫೀಸ್‌ ಧೂಳಿಪಟ

ಬೆಂಗಳೂರು: ನಮ್ಮ ಭಾರತ ಚಿತ್ರರಂಗದಲ್ಲಿ ಬಾಲಿವುಡ್ ಸಿನಿಮಾಗಳು ಅತ್ಯಂತ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ. ಅದೇ ತರ ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾ ಅತ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ.
ಶಾರುಖ್‌ ಖಾನ್‌ ಮತ್ತು ನಯನತಾರಾ ಅಭಿನಯದ ಅಟ್ಲೀ ನಿರ್ದೇಶನದ ಸಿನಿಮಾ ʼಜವಾನ್‌ʼ ಗುರುವಾರ ರಿಲೀಸ್‌ ಆಗಿದ್ದು, 5ನೇ ದಿನಕ್ಕೆ ಕಾಲಿಟ್ಟಿದೆ. ವಾರಾಂತ್ಯದಲ್ಲಿ ಸಕತ್‌ ಸದ್ದು ಮಾಡಿದ್ದು, ಇಲ್ಲಿಯವರೆಗೆ ಒಟ್ಟು 287 ಕೋಟಿ ಕಲೆಕ್ಷನ್‌ ಮಾಡಿದೆ. ಶನಿವಾರ 77.83 ಕೋಟಿ ಸಂಗ್ರಹಣೆ ಮಾಡಿದ್ದು, ಭಾನುವಾರ 81 ಕೋಟಿ ಕಲೆಕ್ಷನ್‌ ಮಾಡಿದೆ.
ಭಾನುವಾರ ಚಲನಚಿತ್ರ ವ್ಯಾಪಾರಕ ವಿಶ್ಲೇಷಕ ಮನೋಬಾಲಾ ವಿಜಯಬಾಲನ್‌ ಸೋಮವಾರ ಅವರು X ಹಂಚಿಕೊಂಡಿದ್ದು, ” ʼಜವಾನ್‌ʼ ಇತಿಹಾಸವನ್ನು ಸೃಷ್ಟಿಸುತ್ತದೆ. ಮತ್ತು 4ನೇ ದಿನದಲ್ಲಿ ಭಾರತದಲ್ಲಿ ಟ್ರ್ಯಾಕ್‌ ಮಾಡಿದ ಶೋಗಳಿಂದ ದಾಖಲೆಯ 2875961 ಟಿಕೆಟ್‌ಗಳನ್ನು ಮಾರಾಟ ಮಾಡಲಾಗಿದೆ.”

ಫ್ರೆಶ್ ನ್ಯೂಸ್

Latest Posts

Featured Videos