ಮೂಳೆ ಪೆಟ್ಟು: ಯಾವಾಗಲಾದರೂ ಮರುಕಳಿಸಬಹುದು ನೋವು ಜೋಕೆ!

ಮೂಳೆ ಪೆಟ್ಟು: ಯಾವಾಗಲಾದರೂ ಮರುಕಳಿಸಬಹುದು ನೋವು ಜೋಕೆ!

ಬೆಂಗಳೂರು, ಏ. 22, ನ್ಯೂಸ್ ಎಕ್ಸ್ ಪ್ರೆಸ್: ಬ್ಯುಸಿ ಯುಗದಲ್ಲಿ ಕೆಲಸ ಮಾಡುವಾಗ ಸಣ್ಣ- ಪುಟ್ಟ ಗಾಯಗಳು ಕಾಮನ್. ಆದರೆ ಸಣ್ಣ ಪುಟ್ಟ ಹಾನಿಯಾದರೂ ದೇಹದಲ್ಲಿರುವ ಇತರೆ ಎಲುಬಿನ ಮೇಲೂ ಪರಿಣಾಮ ಬೀರುತ್ತದೆ. ಈ ಎಚ್ಚರಿಕೆಯನ್ನು ನೀವು ಓದಲೇ ಬೇಕು… ಮೂಳೆ ಮುರಿತದ ಬಗ್ಗೆ ವೈದ್ಯರು ಸಂಶೋಧನೆ ನಡೆಸಿದ್ದು, ಸಾಮಾನ್ಯವಾಗಿ ವಯಸ್ಸಾದವರಿಗೆ ಹಾಗೂ ಕಾಯಿಲೆ ಇರುವರು ಮೂಳೆ ನೋವಿನಿಂದ ಬಳಲುತ್ತಾರೆ. ಈ ಸಮಸ್ಯೆ ವಯಸ್ಕರಲ್ಲಿಯೇ ಏಕೆ ಎಂದು ಪತ್ತೆ ಹಚ್ಚಲು ಸಂಶೋಧನೆ ನಡೆಸಲಾಗಿತ್ತು. ನಾಲ್ಕು ಸಾವಿರ ಜನರನ್ನು ಈ ಸಂಶೋಧನಗೆ ಬಳಸಲಾಗಿತ್ತು. ಪ್ರತಿ ವರ್ಷ ಶೇ. 0.89 -ಶೇ.0.70 ಮಂದಿ ವಿವಿಧ ನೋವಿನಿಂದ ಬಳಲುತ್ತಿದ್ದರು. ಅದರಲ್ಲಿ ಶೇ.0.66 ಮಂದಿ ಒಂದಲ್ಲ ಒಂದು ಕಾಲದಲ್ಲಿ ಮೂಳೆಗೆ ಏಟು ತಿಂದವರೇ ಆಗಿದ್ದರು.  ಯಾವುದೇ ಮೂಳೆಗೆ ಹಾನಿಯಾದರೂ ಮೊದಲೆರಡು ವರ್ಷಗಳು ಎಲುಬಿನ ಸಾಂದ್ರತೆ ಕಡಿಮೆಯಾಗುತ್ತದೆ. ಇದು ಮಂಡಿ ನೋವು, ಭುಜ ನೋವು…ಹೀಗೆ ದೇಹದ ವಿವಿಧ ನೋವಿಗೆ ದಾರಿಗೆ ಮಾಡಿ ಕೊಡುತ್ತದೆ. ಯಾವಾಗಲೋ ತಿಂದ ಏಟು, ಇನ್ಯಾವುದೋ ಸಮಯದಲ್ಲಿ ಮನುಷ್ಯನನ್ನು ಕಾಡುತ್ತದೆ. ಎಲುಬಿನ ಸಾಂದ್ರತೆ ಕಡಿಯಾಗುವುದರಿಂದ ರಕ್ತದಲ್ಲಿ ಉರಿಯಾಗುತ್ತದೆ. ಚಿಕ್ಕ ಮೂಳೆಗಾಗುವ ಪೆಟ್ಟನ್ನು ಚಿಕಿತ್ಸೆ ಮೂಲಕ ಸರಿಪಡಿಸಬಹುದಾಗಿದ್ದು, ವಯಸ್ಸಾಗುತ್ತಿದ್ದಂತೆ ಅದರ ಸುತ್ತ ಇರುವ ಮೂಳೆ ನೋವೂ ಶುರುವಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos