ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ

ಅಫ್ಘಾನಿಸ್ತಾನದಲ್ಲಿ ಬಾಂಬ್ ಸ್ಫೋಟ

ಕಾಬೂಲ್, ಜುಲೈ 3  :  ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯದ ಬಾಗ್ಲಾನ್‌ನಲ್ಲಿ ರಸ್ತೆ ಬದಿಯ ಸಂಭವಿಸಿದ ಬಾಂಬ್ ಸ್ಫೋಟವಾಗಿರುವ ಘಟನೆ ನಡೆದಿದೆ. ಇಬ್ಬರು ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಟೋಲೋ ಸುದ್ದಿ ಶುಕ್ರವಾರ ವರದಿ ಮಾಡಿದೆ.
ಬಾಗ್ಲಾನ್‌ನ ನಹ್ರಿನ್ ಜಿಲ್ಲೆಯಲ್ಲಿ ಘಟನೆ ಸಂಭವಿಸಿದೆ. ಗಾಯಗೊಂಡವರಲ್ಲಿ ನಹ್ರಿನ್ ಪೊಲೀಸ್ ಮುಖ್ಯಸ್ಥ ಅಬ್ದುಲ್ ವಾರಿಸ್ ಕೂಡ ಸೇರಿದ್ದಾರೆ.  ಸರ್ಕಾರ ಮತ್ತು ತಾಲಿಬಾನ್ ನಾಯಕರ ನಡುವೆ ದೀರ್ಘಕಾಲದಿಂದ ನಡೆಯುತ್ತಿರುವ ಹೋರಾಟದ ಮಧ್ಯೆ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳು ಅಫ್ಘಾನಿಸ್ತಾನದಾದ್ಯಂತ ಜಂಟಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸುತ್ತಿವೆ .

ಫ್ರೆಶ್ ನ್ಯೂಸ್

Latest Posts

Featured Videos