ಐಟಿ ಇಲಾಖೆಗೆ ಬಾಂಬ್ ಬೆದರಿಕೆಯ ಮೇಲ್

ಐಟಿ ಇಲಾಖೆಗೆ ಬಾಂಬ್ ಬೆದರಿಕೆಯ ಮೇಲ್

ಬೆಂಗಳೂರು, ಅ. 24: ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳಗಳು ಸ್ಥಳಪರಿಶೀಲನೆ ನಡೆಸಿವೆ.

ಕಸ್ಟಮ್ಸ್ ಡೆಪ್ಯುಟಿ ಕಮಿಷನರ್‌ಗೆ ತಡರಾತ್ರಿ 10.45 ಬಾಂಬ್ ಬೆದರಿಕೆಯ ಇ-ಮೇಲ್ ಬಂದಿತ್ತು. ತಡರಾತ್ರಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ 300 ಪೊಲೀಸರು ಕಸ್ಟಮ್ಸ್ ಮತ್ತು ಐಟಿ ಕಚೇರಿಗೆ ದೌಡಾಯಿಸಿದ್ದು, ಬಿಗಿ ಬಂದೋಬಸ್ತ್ ಹಾಕಲಾಗಿದೆ.

ರಾತ್ರಿ ಇಡಿ ತಪಾಸಣೆ ನಡೆಸಿದ್ದು, ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಪ್ರೋಟಾನ್ ಡಾರ್ಕ್ ನೆಟ್ ಮೂಲಕ ಇ-ಮೇಲ್ ರವಾನೆಯಾಗಿದೆ. ಐಟಿ ಉದ್ಯೋಗಿ ಗೋವಿಂದ್ ಎಂಬಾತ ಇ-ಮೇಲ್ ರವಾನಿಸಿರುವ ಶಂಕೆ ಇದ್ದು, ತನಿಖೆ ಮುಂದುವರಿದಿದೆ. ವಿಷಯ ತಿಳಿದು ಕಂಗಾಲಾಗಿರುವ ಉದ್ಯೋಗಿಗಳು ಕಚೇರಿ ಒಳಗೆ ಪ್ರವೇಶಿಸಲು ಭಯಪಡುತ್ತಿದ್ದಾರೆ.

ಐಟಿ ಕಚೇರಿಗೆ ಹುಸಿ ಬಾಂಬ್ ಕರೆ ಬಂದಿತ್ತು. 1991-92 ರಲ್ಲಿ ಬೆಳಗ್ಗೆ 11.30 ಹೊತ್ತಿಗೆ ಇಂಥದ್ದೇ ಫೋನ್ ಕರೆ ಬಂದು ಗೊಂದಲ ಉಂಟಾಗಿತ್ತೆಂದು ಹಿರಿಯ ಉದ್ಯೋಗಿಗಳು ಹಳೆ ನೆನಪನ್ನು ಮೆಲುಕು ಹಾಕಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos