ಬಾಂಬ್ ಪತ್ತೆ: ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಏರ್ಪೋರ್ಟ್ ಗೆ ಕಟ್ಟೆಚ್ಚರ

ಬಾಂಬ್ ಪತ್ತೆ: ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಏರ್ಪೋರ್ಟ್ ಗೆ ಕಟ್ಟೆಚ್ಚರ

ಹುಬ್ಬಳ್ಳಿ, ಜ. 20: ಮಂಗಳೂರು ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಹಂತದ ತನಿಖೆ ನಡೆದಿದ್ದು, ಬಾಂಬ್ ಇರುವ ಸಂಶಯ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಏರ್ಪೋರ್ಟ್ ಗೆ ಕಟ್ಟೆಚ್ಚರ ವಹಿಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಂಗಳೂರು ಏರ್ಪೋರ್ಟ್ ನಲ್ಲಿ ಬೆಳಿಗ್ಗೆ 10.15 ರ ಸುಮಾರಿಗೆ ಟಿಕೆಟ್ ಕೌಂಟರ್ ಹತ್ತಿರ ಸ್ಪೋಟಕ ವಸ್ತು ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಪ್ರಥಮ ಹಂತದ ತನಿಖೆಯಲ್ಲಿ ಬಾಂಬ ಇರುವುದು ಖಚಿತವಾಗಿದೆ.‌ ಈ ಹಿನ್ನಲೆಯಲ್ಲಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಏರ್ಪೋರ್ಟ್ ಮೇಲೆ ಕಟ್ಟೆಚ್ಚರ ವಹಿಸಲಾಗುದು ಎಂದರು.

ಇನ್ನೂ ಮೇಲಿಂದ ಮೇಲೆ ಭಯ ಹುಟ್ಟಿಸುವ ಕೆಲಸ ಮಾಡಲಾಗುತ್ತಿದ್ದು,  ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ. ಇದು ದೇಶದ್ರೋಹದ ಕೆಲಸವಾಗಿದ್ದು, ಭಯೋತ್ಪಾದನೆ ಮೂಡಿಸುವ ಕೆಲಸ ಆಗುತ್ತಿದ್ದು, ಈ ಪ್ರಕರಣವನ್ನು ಆದಷ್ಟು ಶೀಘ್ರದಲ್ಲೇ ಭೇದಿಸಲಾಗುವುದು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos