ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಗಂಭೀರವಾಗಿ ತನಿಖೆ ನಡೆಯುತ್ತಿದೆ: ಸಿಎಂ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಗಂಭೀರವಾಗಿ ತನಿಖೆ ನಡೆಯುತ್ತಿದೆ: ಸಿಎಂ

ಬೆಂಗಳೂರು: ಬೆಂಗಳೂರಿನ ಕೆಫೆಯಲ್ಲಿ ಅನುಮಾನಾಸ್ಪದ ಸ್ಪೋಟವಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಭಾರಿ ಸ್ಪೋಟ ಸಂಭವಿಸಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಇಂದಿರಾನಗರದ ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಈ ಸ್ಪೋಟ ಸಂಭವಿಸಿದೆ.

ಹೋಟೆಲ್ ಗೆ ಬಂದಿದ್ದ ವ್ಯಕ್ತಿಯ ಬ್ಯಾಗ್ ನಲ್ಲಿದ್ದ ವಸ್ತು ಸ್ಪೋಟಗೊಂಡಿದೆ. ಬೆಂಕಿಯಿಂದಾಗಿ ಹೋಟೆಲ್ ಕೆಲವು ಭಾಗಗಳಲ್ಲಿ ಬೆಂಕಿಯಿಂದ ಹಾನಿಯಾಗಿದೆ. ನಗರದ ಟಿ.ಕೆ. ಲೇಔಟ್ ಬಳಿ ಇರುವ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು

”ಮಾಸ್ಕ್, ಟೋಪಿ‌ ಹಾಕಿಕೊಂಡು ವ್ಯಕ್ತಿಯೊಬ್ಬ ಬಸ್​ನಲ್ಲಿ ಪ್ರಯಾಣಿಸಿಕೊಂಡು ರಾಮೇಶ್ವರ ಕೆಫೆಗೆ ಬಂದಿದ್ದಾನೆ. ಕೆಫೆಯಲ್ಲಿ ರವೆ ಇಡ್ಲಿ ತೆಗೆದುಕೊಂಡು ಒಂದೆಡೆ ಕುಳಿತುಕೊಂಡು ತಿಂದಿದ್ದಾನೆ. ಬಳಿಕ ಟೈಮರ್ ಅಳವಡಿಸಿ ಹೋಗಿದ್ದಾನೆ. ನಂತರ ಬಾಂಬ್​ ಬ್ಲಾಸ್ಟ್ ಆಗಿದೆ. ವ್ಯಕ್ತಿ ಸಂಚಾರ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾವೆ. ಆ ವ್ಯಕ್ತಿಯನ್ನು ಪತ್ತೆ ಹಚ್ಚುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಈ ಪ್ರಕರಣದ ಕುರಿತು ಸೀರಿಯಸ್ ಆಗಿ ತನಿಖೆ ನಡೆಯುತ್ತಿದೆ. ಇಂದು ನಾನು ಕೂಡ ಆಸ್ಪತ್ರೆಗೆ ಹಾಗೂ ಘಟನಾ ಸ್ಥಳಕ್ಕೆ ತೆರಳುತ್ತೇನೆ” ಎಂದರು.

ಬಾಂಬ್ ಸ್ಫೋಟ ಪ್ರಕರಣದ ವಿಚಾರದಲ್ಲಿ ಬಿಜೆಪಿಯವರು ರಾಜಕಾರಣ ಮಾಡಬಾರದು. ಮಂಗಳೂರು ಬಾಂಬ್ ಬ್ಲಾಸ್ಟ್ ಹಾಗೂ ಬೆಂಗಳೂರು ಬ್ಲಾಸ್ಟ್​ಗೆ ಯಾವುದೇ ಸಂಬಂಧವಿಲ್ಲ. ಬ್ಲಾಸ್ಟ್ ಮಾಡಿದ್ದನ್ನ ನಾನು ಖಂಡಿಸುತ್ತೇನೆ. ಬಾಂಬ್ ಬ್ಲಾಸ್ಟ್ ಸಂಬಂಧ ಇನ್ನೂ ಕೂಡ ತನಿಖೆ ನಡೆಯುತ್ತಿದೆ. ವರದಿ ಬಳಿಕ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು‌” ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದರು. ಈ ಘಟನೆ ಕುರಿತು ಗಂಭೀರವಾಗಿ ತನಿಖೆ ನಡೆಯುತ್ತಿದೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos