ಬಾಂಬ್ ಸ್ಫೋಟ ಬೆದರಿಕೆ

ಬಾಂಬ್ ಸ್ಫೋಟ ಬೆದರಿಕೆ

ಕೊಲ್ಕತಾ, ಜ. 13 : ಬಾಂಬ್ ಸ್ಪೋಟಿಸುವುದಾಗಿ ಮಹಿಳಾ ಪ್ರಯಾಣಿಕರೊಬ್ಬರು ಬೆದರಿಕೆ ವಿಮಾನದಲ್ಲಿ ಆತಂಕದ ಸ್ಥಿತಿ ಮನೆಮಾಡಿತ್ತು. ಯಾವ ಕ್ಷಣದಲ್ಲಿ ಬೇಕಾದರೂ ಬಾಂಬ್ ಸ್ಫೋಟದಿಂದ ವಿಮಾನದಲ್ಲಿರುವವರ ಜೀವ ಹೋಗಬಹುದು ಎಂದು ಪೈಲಟ್ಗೆ ತಿಳಿಸಿದರು.
ಪೈಲಟ್ ಕೊಲ್ಕತಾದ ಏರ್ಪೋರ್ಟ್ಗೆ ವಿಮಾನವನ್ನು ತಿರುಗಿಸಿದ್ದರು. ಆದರೆ, ಕೊಲ್ಕತಾ ವಿಮಾನ ನಿಲ್ದಾಣಕ್ಕೆ ಮರಳಿದ ವಿಮಾನದಿಂದಿಳಿದ ಆ ಯುವತಿಯನ್ನು ತಪಾಸಣೆ ಮಾಡಿದಾಗ ಸಿಬ್ಬಂದಿಗೆ ಅಚ್ಚರಿ ಕಾದಿತ್ತು!

ಕೊಲ್ಕತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಿಂದ ಶನಿವಾರ ರಾತ್ರಿ ಮುಂಬೈಗೆ ಹೊರಟಿದ್ದ ಏರ್ ಏಷ್ಯಾ ವಿಮಾನದಲ್ಲಿ 114 ಪ್ರಯಾಣಿಕರಿದ್ದರು. ವಿಮಾನ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಗಗನಸಖಿಯ ಕೈಯಲ್ಲಿ ಪೈಲಟ್ಗೆ ಚೀಟಿಯೊಂದನ್ನು ಕಳುಹಿಸಿದ್ದರು. ಆ ಚೀಟಿಯನ್ನು ನೋಡಿದ ಪೈಲಟ್ಗೆ ಗಾಬರಿ ಉಂಟಾಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos