ಬಿಗ್- ಬಿ ಆಸ್ಪತ್ರೆಗೆ ದಾಖಲು

ಬಿಗ್- ಬಿ ಆಸ್ಪತ್ರೆಗೆ ದಾಖಲು

ಮುಂಬೈ, ಅ.18 : ಅಮಿತಾಭ್ ಹರಿವಂಶ್ ಬಚ್ಚನ್ ಭಾರತದ ಒಬ್ಬ ಚಲನ ಚಿತ್ರ ನಟ. ಜನಪ್ರಿಯತೆಗಳಿಸಿದ ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿದು ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ಮುಂಬೈನ ನಾನಾವತಿ ಆಸ್ಪತ್ರೆಗೆ ಅಮಿತಾಬ್ ರೂಟಿನ್ ಚೆಕಪ್ಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಭಾನುವಾರ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.
ಗುರುವಾರ ಕರ್ವಾ ಚೌತ್ ಹಬ್ಬ ಹಿನ್ನಲೆ ಅಮಿತಾಬ್ ತಮ್ಮ ಟ್ವಿಟ್ಟರಿನಲ್ಲಿ ಜಯಾ ಬಚ್ಚನ್ ಜೊತೆಯಿರುವ ಕಪ್ಪು-ಬಿಳಿ ಬಣ್ಣದ ಫೋಟೋ ಟ್ವೀಟ್ ಮಾಡಿದ್ದರು. ಅ. 11ರಂದು ಅಮಿತಾಬ್ ತಮ್ಮ 77ನೇ ಹುಟ್ಟುಹಬ್ಬಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಹಿಂದಿನ ದಿನ ಅಮಿತಾಬ್, ನಾನು ಹುಟ್ಟುಹಬ್ಬ ಆಚರಿಸಲು ಇಷ್ಟಪಡುತ್ತಿಲ್ಲ ಎಂದಿದ್ದರು. ನಾನು ಇನ್ನೂ ಕೆಲಸ ಮಾಡುತ್ತಿರುವುದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ನನ್ನ ದೇಹವು ನನ್ನ ಆತ್ಮದೊಂದಿಗೆ ವೇಗವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ನಾನು ಅಭಿಮಾನಿಗಳಲ್ಲಿ ಕೇಳುತ್ತೇನೆ” ಎಂದು ಮನವಿ ಮಾಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos