ಬಾಲಿವುಡ್ ನಟ ಅಜಯ್ ದೇವಗನ್ ತಂದೆ,ವೀರು ದೇವಗನ್ ನಿಧನ

ಬಾಲಿವುಡ್ ನಟ ಅಜಯ್ ದೇವಗನ್ ತಂದೆ,ವೀರು ದೇವಗನ್ ನಿಧನ

ಮುಂಬೈ, ಮೇ. 27, ನ್ಯೂಸ್‍ ಎಕ್ಸ್ ಪ್ರೆಸ್‍:  ಬಾಲಿವುಡ್ ನಟ ಅಜಯ್ ದೇವಗನ್ ತಂದೆ, ನಿರ್ದೇಶಕ ವೀರು ದೇವಗನ್ ಇಹಲೋಕ ತ್ಯಜಿಸಿದ್ದಾರೆ. ವೀರು ದೇವಗನ್ ನಿಧನದ ಸುದ್ದಿ ಬಾಲಿವುಡ್  ದುಃಖಕ್ಕೆ ಕಾರಣವಾಗಿದೆ.  ವೀರು ದೇವಗನ್ ಸಾವಿನ ಸುದ್ದಿ ಹರಡುತ್ತಿದ್ದಂತೆ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ.

ವೀರು ದೇವಗನ್ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಕೆಲ ಚಿತ್ರಗಳ ನಿರ್ಮಾಣ ಮಾಡಿದ್ದರು. ವೃತ್ತಿ ಜೀವನದಲ್ಲಿ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇಂದು ಮುಂಬೈನಲ್ಲಿ ವೀರು ದೇವಗನ್ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳಿಂದ ಅವ್ರ ಆರೋಗ್ಯ ಸರಿಯಿರಲಿಲ್ಲ. ವೀರು ದೇವಗನ್ ಅಂತಿಮ ಸಂಸ್ಕಾರ ಮುಂಬೈನಲ್ಲಿ ನಡೆಯಲಿದೆ. 14ನೇ ವಯಸ್ಸಿನಲ್ಲಿಯೇ ಅಮೃತ್ ಸರದಿಂದ ಮುಂಬೈಗೆ ಓಡಿ ಬಂದಿದ್ದ ವೀರು ದೇವಗನ್, ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣ ಬೆಳೆಸಿ ಜೈಲೂಟ ತಿಂದಿದ್ದರು. ನಂತ್ರ ಕಾರು ಕ್ಲೀನ್ ಮಾಡುವ ಕೆಲಸಕ್ಕೆ ಸೇರಿ ಹೊಟ್ಟೆ ತುಂಬಿಸಿಕೊಳ್ತಿದ್ದರು. ಚಿತ್ರದಲ್ಲಿ ಹೀರೋ ಆಗುವ ಕನಸು ಕಂಡಿದ್ದವರು ನಂತ್ರ ಸಾಹಸ ನಿರ್ದೇಶಕರಾದ್ರು. ಮಗ ಅಜಯ್ ದೇವಗನ್ ಗೆ ನಟನ ಪಾತ್ರ ಕೊಡಿಸಲು ವೀರು ದೇವಗನ್ ಪರಿಶ್ರಮ ಸಾಕಷ್ಟಿದೆ.

ಫ್ರೆಶ್ ನ್ಯೂಸ್

Latest Posts

Featured Videos