ಬಿಎಂಟಿಸಿ ಚಾಲಕರು, ಕಂಡಕ್ಟರ್ ಕಂಗಾಲು!

ಬಿಎಂಟಿಸಿ ಚಾಲಕರು, ಕಂಡಕ್ಟರ್ ಕಂಗಾಲು!

ಬೆಂಗಳೂರು, ಅ. 5: ನಾಡ ಹಬ್ಬವನ್ನ ಎಲ್ಲೇಡೆ ಬಹು ಸಡಗರ ಸಂಮ್ರಮದಿಂದ ಆಚರಿಸುತ್ತಾರೆ. ಹೌದು, ವರುಷಕ್ಕೆ ಒಂದು ಸಾರಿ ಬರುವ ಅಯುಧ ಪೂಜೆಗಾಗಿ ಬಿಎಂಟಿಸಿ ಸಂಸ್ಥೆಯಿಂದ ಪುಡಿಗಾಸು ಬಿಡುಗಡೆಯಾಗಿದ್ದು, ಇದನ್ನು ನೋಡಿರುವ ಚಾಲಕರು, ಕಂಡಕ್ಟರ್ ಕಂಗಾಲು ಆಗಿದ್ದಾರೆ.

ಆಯುಧ ಪೂಜೆ ಸಲುವಾಗಿ ಬಿಎಂಟಿಸಿ ಸಂಸ್ಥೆಯಿಂದ ಒಂದು ಬಸ್ಸಿಗೆ 40 ರಿಂದ 100 ನೀಡಲು ಮುಂದಾಗಿದೆ ಎನ್ನಲಾಗಿದೆ. ಇದೇ ವೇಳೆ ಸಂಸ್ಥೆಯಿಂದ ಇಷ್ಟು ಕಡಿಮೆ ಮೊತ್ತದ ಹಣ ನೀಡುತ್ತಿರುವುದು ಚಾಲಕರು, ಕಂಡಕ್ಟರ್ಗಳಲ್ಲಿ ಬೇಸರಕ್ಕೆ ಕಾರಣವಾಗಿದ್ದು, ವರುಷಕ್ಕೆ ಒಮ್ಮೆ ಬರುವ ಈ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಬೇಕು ಅನ್ನೋಂದು ನಮ್ಮ ಆಸೆ ಇರುತ್ತದೆ. ಆದರೆ ಈಗ ಇಷ್ಟು ಕಡಿಮೆ ಮೊತ್ತದ ಹಣವನ್ನು ನೋಡಿದೆ ಇದರಲ್ಲಿ ಏನು ಬರುತ್ತದೆ ಅನ್ನೊಂದು ನಮ್ಮನ್ನು ಕಾಡೋದು ಸಹಜ.

ಒಂದು ಊದುಭತ್ತಿಯ ಬೆಲೆ 20 ರೂಗಳು ಆಗಿದೆ. ಉಳಿದ ವಸ್ತುಗಳನ್ನು ತರುವುದಕ್ಕೆ ಹಣವನ್ನು ಎಲ್ಲಿಂದ ತರಬೇಕು ಅಂತ ಕೆಲವು ಕೇಳಿದರೆ. ಇನ್ನೂ ಕೆಲವರು ನಮ್ಮ ಕೈನಿಂದ ಹಣವನ್ನು ಹಾಕಿ ನಮ್ಮ ವಾಹವನ್ನು ಅದ್ದೂರಿಯಾಗಿ ಅಲಂಕಾರ ಮಾಡುತ್ತೇವೆ ಅಂತ ಹೇಳುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos