ಬಿಎಂಆರ್ಸಿಎಲ್: ಉದ್ಯೋಗ ಅವಕಶ

  • In State
  • March 7, 2019
  • 229 Views
ಬಿಎಂಆರ್ಸಿಎಲ್: ಉದ್ಯೋಗ ಅವಕಶ

ಬೆಂಗಳೂರು, ಮಾ.7, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ 100 ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು  ಆಸಕ್ತಿಯುಳ‍್ಳ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 4, 8, 2019 ಕೊನೆ ದಿನಾಂಕವಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಇಂಜಿನಿಯರ್ ಹುದ್ದೆಗಳನ್ನು ಕಾಂಟ್ರಕ್ಟ್ ಬೇಸಿಸ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಎಕ್ಸಿಕ್ಯುಟೀಚ್ ಇಂಜಿನಿಯರ್ (ಬಿ.ಇ/ಬಿ.ಟೆಕ್), ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಇಂಜಿನಿಯರ್ (ಬಿಇ, ಬಿಟೆಕ್), ಅಸಿಸ್ಟೆಂಟ್ ಇಂಜಿನಿಯ್ (ಡಿಪ್ಲೊಮಾ, ಬಿಇ, ಬಿ.ಟೆಕ್), ಸೆಕ್ಷನ್ ಇಂಜಿನಿಯರ್ (ಡಿಪ್ಲೊಮಾ, ಬಿಇ, ಬಿಟೆಕ್) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ವಯೋಮಿತಿ : ಎಕ್ಸಿಕ್ಯುಟೀಚ್ ಇಂಜಿನಿಯರ್ ಹುದ್ದೆಗೆ 50, ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಇಂಜಿನಿಯರ್ ಹುದ್ದೆಗೆ 45, ಅಸಿಸ್ಟೆಂಟ್ ಇಂಜಿನಿಯ್ ಹುದ್ದೆಗೆ 40, ಸೆಕ್ಷನ್ ಇಂಜಿನಿಯರ್ ಹುದ್ದೆಗೆ 35 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ.

ವೇತನ ಶ್ರೇಣಿ : ಎಕ್ಸಿಕ್ಯುಟೀಚ್ ಇಂಜಿನಿಯರ್ 80,000, ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಇಂಜಿನಿಯರ್ 65,000, ಅಸಿಸ್ಟೆಂಟ್ ಇಂಜಿನಿಯ್ 50,000, ಸೆಕ್ಷನ್ ಇಂಜಿನಿಯರ್ 36, 000 ಪ್ರತಿ ತಿಂಗಳ ವೇತನ ನಿಗದಿ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಎಂದು ಸ್ಪಷ್ಟವಾಗಿ ಬರೆದಿರಬೇಕು.

 

ಫ್ರೆಶ್ ನ್ಯೂಸ್

Latest Posts

Featured Videos