ರಕ್ತದೊತ್ತಡ ನಿಯಂತ್ರಿಸುವುದಕ್ಕಾಗಿ ಅನುಸರಿಸಿ ಈ ಆಹಾರ ಪದ್ಧತಿ

ರಕ್ತದೊತ್ತಡ ನಿಯಂತ್ರಿಸುವುದಕ್ಕಾಗಿ ಅನುಸರಿಸಿ ಈ ಆಹಾರ ಪದ್ಧತಿ

ಅಧಿಕ ರಕ್ತದೊತ್ತಡ ಅಥವಾ ಹೈಪರ್‌ಟೆನ್ಶನ್ ಎಂಬುದು ಜೀವನಶೈಲಿಯಿಂದ ಬರುವ ಕಾಯಿಲೆಯಾಗಿರುತ್ತದೆ. ಒಂದು ವೇಳೆ ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಲ್ಲಿ, ನೀವು ಹೃದಯ ಸ್ತಂಭನ, ಹೃದಯಾಘಾತ, ಪಾರ್ಶ್ವವಾಯು, ಮೂತ್ರಪಿಂಡದ ವೈಫಲ್ಯ, ಇತ್ಯಾದಿ ಆರೋಗ್ಯ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ನಿಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳಲ್ಲಿ ಒಂದು ಗಮನಾರ್ಹವಾದ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದುದು ಅತ್ಯಗತ್ಯ.

ಬನ್ನಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಿಕೊಳ್ಳಲು ನಿಮ್ಮ ಆಹಾರ ಪದ್ಧತಿಯಲ್ಲಿ ಈ ಟಾಪ್ 8 ಆಹಾರಗಳನ್ನು ಸೇವಿಸಲು ಮರೆಯಬೇಡಿ:

ಹಸಿರು ಸೊಪ್ಪುಗಳು
(Green leafy vegetables):

ಹಸಿರು ಸೊಪ್ಪುಗಳಲ್ಲಿ ಅಧಿಕ ಮಟ್ಟದ ಪೋಷಕಾಂಶಗಳು ಇದ್ದು, ಇವು ಮೂತ್ರದಿಂದ ಸೋಡಿಯಂ ಅನ್ನು ನಿವಾರಿಸಿಕೊಳ್ಳಲು ಮೂತ್ರಪಿಂಡಗಳಿಗೆ ಸಹಾಯ ಮಾಡುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ. ಹಸಿರು ಸೊಪ್ಪಿನಲ್ಲಿ ಕಬ್ಬಿಣಾಂಶ, ಫೋಲೆಟ್ ಮತ್ತು ನಾರಿನಂಶ ಯಥೇಚ್ಛವಾಗಿರುತ್ತವೆ. ಕೇಲ್, ರೊಮೈನ್ ಲೆಟ್ಯೂಸ್, ಸ್ಪಿನಾಚ್, ಟರ್ನಿಪ್ ಇತ್ಯಾದಿಗಳಲ್ಲಿ ಪೊಟಾಶಿಯಂ ಅಧಿಕ ಮಟ್ಟದಲ್ಲಿ ಇರುತ್ತದೆ.

ಬೆಳ್ಳುಳ್ಳಿ (Garlic):

ಬೆಳ್ಳುಳ್ಳಿಯು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಅತ್ಯುತ್ತಮ ಆಹಾರ ಪದಾರ್ಥಗಳಾಗಿವೆ. ಬೆಳ್ಳುಳ್ಳಿಯು ದೇಹದಲ್ಲಿ ನೈಟ್ರಿಕ್ ಆಮ್ಲವನ್ನು ಹೆಚ್ಚಿಸುವ ಕೆಲವೊಂದು ರಾಸಾಯನಿಕಗಳಿವೆ. ಇವು ರಕ್ತನಾಳಗಳನ್ನು ಅಗಲ ಮಾಡುತ್ತವೆ ಅಥವಾ ವ್ಯಾಸೊಡೈಲೇಶನ್ ಮಾಡಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ.

ಯೋಗರ್ಟ್ ಮತ್ತು
ಸ್ಕಿಮ್ ಹಾಲು
(Yogurt and skim milk):

ಸ್ಕಿಮ್ ಹಾಲಿನಲ್ಲಿ ಕೊಬ್ಬಿನ ಅಂಶವು ಕಡಿಮೆ ಇರುತ್ತದೆ ಮತ್ತು ಇದರಲ್ಲಿ ಕ್ಯಾಲ್ಸಿಯಂನ ಅಂಶವು ಯಥೇಚ್ಛವಾಗಿರುತ್ತದೆ. ಈ ಎಲ್ಲಾ ಅಂಶಗಳು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಕಡಿಮೆ ಕೊಬ್ಬಿರುವ ಯೋಗರ್ಟ್ ಅನ್ನು ಸೇವಿಸುವುದು ಸಹ ಒಳ್ಳೆಯ ಆಯ್ಕೆಯಾಗಿರುತ್ತದೆ. ಆದರೂ ಯೋಗರ್ಟ್‌ನಲ್ಲಿರುವ ಸಕ್ಕರೆ ಅಂಶಗಳ ಕಡೆಗೆ ಗಮನ ಹರಿಸುವುದು ಒಳ್ಳೆಯದು.

ಬಾಳೆಹಣ್ಣು (Banana):

ಬಾಳೆಹಣ್ಣುಗಳನ್ನು ಸೇವಿಸುವ ಮೂಲಕ ರಕ್ತದೊತ್ತಡವನ್ನು ಹತೋಟಿಯಲ್ಲಿಡಬಹುದು. ಬಾಳೆಹಣ್ಣಿನಲ್ಲಿ ಅಧಿಕ ಮಟ್ಟದ ಪೋಟಾಶಿಯಂ ಇರುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಾಳೆಹಣ್ಣನ್ನು ಓಟ್ಸ್ ಮತ್ತು ಮ್ಯುಸ್ಲಿ ಜೊತೆಗೆ ಬೆಳ್ಳಂಬೆಳಗ್ಗೆ ಸೇವಿಸಿ.

ಮೀನು (Fish):

ಮೀನು ಒಮೆಗಾ-3 ಕೊಬ್ಬಿನ ಆಮ್ಲಗಳು ಮತ್ತು ಪ್ರೋಟೀನ್‍ಗಳನ್ನು ಸಹ ಒಳಗೊಂಡಿರುತ್ತವೆ. ಒಮೆಗಾ-3 ರಕ್ತದೊತ್ತಡವನ್ನು, ಕೊಲೆಸ್ಟೆರಾಲ್ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.

ಬೀಜಗಳು (Seeds)

ಸೂರ್ಯಕಾಂತಿ, ಕುಂಬಳಕಾಯಿ ಮತ್ತು ಕ್ಯಾಂಟಲೌಪ್ ಬೀಜಗಳಲ್ಲಿ ಪೊಟಾಶಿಯಂ, ಮೆಗ್ನಿಷಿಯಂ ಮತ್ತು ಇನ್ನಿತರ ಖನಿಜಾಂಶಗಳು ಇರುತ್ತವೆ. ಇವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಆದರೂ ಉಪ್ಪು ಹಾಕದ ಬೀಜಗಳನ್ನು ಸೇವಿಸಿ, ಗರಿಷ್ಠ ಪ್ರಯೋಜನಗಳನ್ನು ಪಡೆಯಿರಿ.

ಡಾರ್ಕ್ ಚಾಕೊಲೇಟ್ (Dark chocolate): ಚಾಕೊಲೇಟ್ ಪ್ರಿಯರಿಗೆ ಇಲ್ಲಿದೆ ಶುಭಸುದ್ದಿ. ಡಾರ್ಕ್ ಚಾಕೊಲೇಟ್ ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಡಾರ್ಕ್ ಚಾಕೊಲೇಟಿನಲ್ಲಿರುವ ಫ್ಲಾವನೊಲ್‌ಗಳು ನೈಟ್ರಿಕ್ ಆಕ್ಸೈಡ್ ಅನ್ನು ಸಕ್ರಿಯಗೊಳಿಸುತ್ತವೆ. ಇವು ರಕ್ತ ನಾಳಗಳನ್ನು ಅಗಲ ಮಾಡುತ್ತವೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತವೆ. ಚಾಕೊಲೇಟ್ ಸೇವಿಸುವಾಗ 50 – 70% ಕೊಕೊ ಅಂಶವಿರುವ ಕಡಿಮೆ ಸಕ್ಕರೆ ಇರುವ ಚಾಕೊಲೇಟ್ ಮಾತ್ರ ಸೇವಿಸಿ.

ಫ್ರೆಶ್ ನ್ಯೂಸ್

Latest Posts

Featured Videos