ರಕ್ತ ಪ್ರಯೋಗಾಲಯ ಪ್ರಾರಂಭ

ರಕ್ತ ಪ್ರಯೋಗಾಲಯ ಪ್ರಾರಂಭ

ಬೆಂಗಳೂರು, ನ. 6: ರಾಷ್ಟ್ರದಲ್ಲಿ 49 ರಕ್ತ ಪರಿಕ್ಷಾ ಪ್ರಯೋಗಾಲಯಗಳನ್ನು ಹೊಂದಿದ್ದು, ಬೆಂಗಳೂರಿನಲ್ಲಿ 5೦ ಮತ್ತು 51 ನೇ ಶಾಖೆಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಅಖಿಲ ಭಾರತೀಯ ತರಪಂತ್ ಯುವಕ ಪರಿಷತ್ ಅದ್ಯಕ್ಷ ವಿಮಾಲ್ ಕಟಾರಿಯಾ ತಿಳಿಸಿದರು.

ನಗರದ ಪ್ರೆಸ್ ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾ ಘೋಷ್ಠಿಯಲ್ಲಿ  ಮಾತನಾಡಿದ  ನವೆಂಬರ್ 7 ರಂದು ಹುನುಮಂತನಗರ ಶಾಸಕರಾದ ರವಿಸುಬ್ರಮಣ್ಯ ಅವರು ಉದ್ಘಾಟಿಸಲಿದ್ದಾರೆ.  ನ. 8 ರಂದು ರಾಜಾಜಿನಗರಲ್ಲಿ 51 ನೇ ಪ್ರಯೋಗಾಲಯ ಶಾಖೆಯನ್ನು ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವತ್ ನಾರಾಯಣ ಅವರು ನೆರವೇರಿಸಲಿದ್ದಾರೆ. ಶಿಕ್ಷಣ ಸಚಿವರಾದ ಸುರೇಶ್ ಕುಮಾರ್, ಬಿಬಿಎಂಪಿ ಸದಸ್ಯರಾದ ಚಂದ್ರಕಲಾ ಗಿರೀಶ್ ಅವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ನಮ್ಮ  ಕೇಂದ್ರಗಳಲ್ಲಿ ಪ್ಯಾಥಾಲಜಿ ಟೆಸ್ಟ್, ಎಕ್ಸ್-ರೇ, ಅಲ‍್ಟ್ರಾ ಸೌಂಡ್, ಸ್ಕ್ಯಾನಿಂಗ್, ಇಸಿಜಿ, ಡಯಾಲಿಸಿಸ್, ಮತ್ತು ಡೆಂಟಲ್ ಚೆಕಪ್ ಸೇವಾ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದ ಅವರು ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ರಕ್ತ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಪತ್ರಿಕಾ ಘೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ರಾಜಾಜಿನಗರದ ಸತೀಶ್, ಮನೊಜ್ ಮತ್ತು ಗೌತಮ್  ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos