ರಕ್ತದಾನ ಮತ್ತು ನೇತ್ರದಾನ ಶಿಬಿರ

ರಕ್ತದಾನ ಮತ್ತು ನೇತ್ರದಾನ ಶಿಬಿರ

ಕೆ.ಆರ್.ಪುರ, ಡಿ. 18: ವೈದ್ಯಲೋಕ ಸಾಕಷ್ಟು ಮುಂದುವರಿದಿದ್ದು, ಕೃತಕ ಅಂಗಾಂಗಗಳನ್ನು ಕಸಿ ಮಾಡಿಯೂ ಆಗಿದೆ, ಆದರೆ ಕೃತಕ ರಕ್ತ ಸೃಷ್ಟಿ ಸಾಧ್ಯವಾಗಿಲ್ಲ, ಹೀಗಾಗಿ ರಕ್ತದಾನದ ಮೂಲಕ ಮಾತ್ರ ಬೇಡಿಕೆಯನ್ನು ಪೂರೈಸಬಹುದು ಎಂದು ಬೆಂ.ಪೂರ್ವ ತಾಲೂಕು ವೈಧ್ಯಾದಿಕಾರಿ ಡಾ.ಚಂದ್ರಶೇಖರ್ ತಿಳಿಸಿದರು.

ಬಾಬಾಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರ 63ನೆ ಪರಿನಿರ್ವಹಣ ದಿನದ ಅಂಗವಾಗಿ ಕೆ.ಆರ್.ಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಂಘಟಿತ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಅರುಣ್ ಕುಮಾರ್ ಅವರ ವತಿಯಿಂದ ಹಾಗೂ ಸರ್ಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಹಾಗೂ ನೇತ್ರದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರಕ್ತದಾನ ಮಾಡುವರಿಂದ ಮತ್ತೊಬ್ಬರ ಪ್ರಾಣ ಉಳಿಸುವುದಲ್ಲದೆ ನಮ್ಮ ಆರೋಗ್ಯದಲ್ಲೂ ಸಹ ಬೇಡವಾದಂಹ ಕೊಬ್ಬಿನ ಅಂಶ ತೆಗೆದುಹಾಕಲು ಸಹಾಯಕಾರಿ ಯಾಗುತ್ತಾದೆ ಎಂದು ತಿಳಿಸಿದರು.

ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಹಾಗೂ ನೇತ್ರದಾನ ಶಿಬಿರಕ್ಕೆ ನೇತೃತ್ವ ವಹಿಸಿದ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿದರು. ಜನರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರೆ, ಮಾನವೀಯ ಸಮಾಜ ಕಾಣಲು ಸಾಧ್ಯ, ಈ ಹಿನ್ನೆಲೆಯಲ್ಲಿ ರಕ್ತದಾನದಿಂದ ಆಗುವ ಉಪಯೋಗಗಳು ಸಾಕಷ್ಟಿದೆ ಎಂದರು.

ರಕ್ತದಾನ ಮಾಡುವುದರಿಂದ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ ಆರೋಗ್ಯದ ಸುಧಾರಣೆಗೆ ಸಹಾಯವಾಗುತ್ತದೆ ಎಂದು ವೈದ್ಯರು ತಿಳಿಸುತ್ತಾರೆ ಎಂದರು.

ಯಾರು ರಕ್ತ ದಾನ ಮಾಡಬಹುದು

*18ರಿಂದ 60 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿ.

*ಪುರುಷರು 3 ತಿಂಗಳಿಗೊಮ್ಮೆ, ಮಹಿಳೆಯರು 6 ತಿಂಗಳಿಗೊಮ್ಮೆ

*ಪುರುಷರ ತೂಕ 45 ಕೆ.ಜಿ. ಹಾಗೂ ಮಹಿಳೆಯರ ತೂಕ 50 ಕೆ.ಜಿ. ಇರಬೇಕು.

*ದಾನಿಗಳ ಸಿಸ್ಟಾಲಿಕ್‌ ರಕ್ತದ ಒತ್ತಡ 140 ಹಾಗೂ ಡಯಾಸ್ಟಾಲಿಕ್‌ ರಕ್ತದ ಒತ್ತಡ 70ರಿಂದ 100 ಇರಬೇಕು.

*ರಕ್ತದಲ್ಲಿ ಹಿಮೋಗ್ಲೋಬಿನ್‌ ಅಂಶ 12.5ಕ್ಕಿಂತ ಹೆಚ್ಚಿರುವರು ರಕ್ತ ದಾನ ಮಾಡಬಹುದು.

ಯಾರು ರಕ್ತದಾನ ಮಾಡುವಂತಿಲ್ಲ

*ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿದ್ದರೆ.

*ಆಲ್ಕೋಹಾಲ್‌ ಅಥವಾ ಆ್ಯಂಟಿಬಯೋಟಿಕ್‌ಗಳನ್ನು ಸೇವಿಸಿದ 72 ಗಂಟೆಗಳವರೆಗೆ.

*ಕಾಯಿಲೆ ವಿರುದ್ಧ ವ್ಯಾಕ್ಸಿನೇಷನ್‌ ಮಾಡಿಸಿಕೊಂಡಿದ್ದವರು ನಾಲ್ಕು ವಾರದವರೆಗೆ.

*ಆಸ್ಪಿರಿನ್‌ ಮಾತ್ರೆ ಸೇವಿಸಿದ್ದರೆ, 3 ದಿನಗಳವರೆಗೆ ವೈದ್ಯೋಪಚಾರದಲ್ಲಿದ್ದರೆ, ಸ್ವತಃ ರಕ್ತಪಡೆದಿದ್ದರೆ, 3 ತಿಂಗಳ ಮೊದಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ ರಕ್ತ ದಾನ ಮಾಡುವಂತಿಲ್ಲ.

ಜಾಂಡೀಸ್‌, ಡಯಾಬಿಟಿಕ್‌, ಕ್ಯಾನ್ಸರ್‌, ಹೆಪಟೈಟಿಸ್‌ ಬಿ ಮತ್ತು ಸಿ, ಹೃದ್ರೋಗ, ಅಸ್ವಾಭಾವಿಕ ರಕ್ತಸ್ರಾವ, ಸಕಾರಣವಿಲ್ಲದ ತೂಕ ಇಳಿಯುವಿಕೆ, ಕಿಡ್ನಿ-ಲಿವರ್‌ ಸಂಬಂಧಿ ಕಾಯಿಲೆ, ಬ್ರಾಂಕೈಟಿಸ್‌, ಮೂರ್ಛೆ ಕಾಯಿಲೆ ಹಾಗೂ ಮಾನಸಿಕ ಒತ್ತಡ ಮತ್ತು ಅಸ್ವಸ್ಥತೆ ಇದ್ದವರು, ಎಚ್‌ಐವಿ/ಏಡ್ಸ್‌ ಇರುವವರು ರಕ್ತ ದಾನ ಮಾಡುವಂತಿಲ್ಲ ಎಂದು ವೈದ್ಯರು ಮಾತಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೈದ್ಯರಾದ ಡಾ.ಅಶೋಕ್ ರೆಡ್ಡಿ, ಡಾ.ರಾಮಕೃಷ್ಣಪ್ಪ, ಕರ್ನಾಟಕ ಪ್ರಾದೇಶಿಕ ಅಸಂಘಟಿತ ಕಾರ್ಮಿಕ ಸಂಘದ ರಾಜ್ಯ ಉಪಾಧ್ಯಕ್ಷ ರವಣಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಈಕಂಬಳ್ಳಿ ಮಂಜು, ಕೋಲಾರ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಸಿ.ಎಂ.ಯಲ್ಲಪ್ಪ, ಪಧಾದಿಕಾರಿ ಟೈಗರ್ ಶಿವಕುಮಾರ್, ಆಸ್ಪತ್ರೆಯ ಆಡಳಿತ ವೃಂದದವರು ಸೇರಿದಂತೆ ಇತರರು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos