ರಕ್ತದಾನ ಶಿಬಿರ: ಜಿಲ್ಲಾ ಪಂಚಾಯ್ತ ಚುಂಚೇಗೌಡ, ಸ್ಥಳೀಯ ಮುಖಂಡರು

ರಕ್ತದಾನ ಶಿಬಿರ: ಜಿಲ್ಲಾ ಪಂಚಾಯ್ತ ಚುಂಚೇಗೌಡ, ಸ್ಥಳೀಯ ಮುಖಂಡರು

ದೊಡ್ಡಬಳ್ಳಾಪುರ, ಜು. 9: ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡುವ ಮೂಲಕ ಹತ್ತಾರು ಜೀವ ಉಳಿಸುವಂತಹ ಸಾರ್ಥಕ ಕೆಲಸ ಮಾಡಲು ಎಲ್ಲರೂ ಮುಂದಾಗಬೇಕು ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಅವರು ತಾಲ್ಲೂಕಿನ ಕನಸವಾಡಿಯ ಕನ್ನಮಂಗಲ ಗೇಟ್ನ ಎಲ್ .ಜಿ.ಹಮಲ್‌ನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಜಿ. ಚುಂಚೇಗೌಡ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿಮಾತನಾಡಿದರು.

ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಹಲವಾರು ಕಾರಣಗಳಿಂದ ಅಪಘಾತದಲ್ಲಿ ಗಾಯಗೊಂಡವರ ಜೀವ ಉಳಿಸಲು ರಕ್ತ ನೀಡುವ ಅವಶ್ಯಕತೆ ಇರುತ್ತದೆ. ಆದರೆ, ರಕ್ತ ದಾನಿಗಳ ಸಂಖ್ಯೆ ಬೇಡಿಕೆಗೆತಕ್ಕಂತೆ ಇಲ್ಲ. ಹೀಗಾಗಿ ಆರೋಗ್ಯವಂತ ಯುವ ಜನರು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸುವ ಕೆಲಸವನ್ನು ಮಾಡಬೇಕು ಎಂದರು.

ಶಿಬಿರದಲ್ಲಿ 150 ಜನ ರಕ್ತದಾನ ಮಾಡಿದರು. ಎಪಿಎಂಸಿ ನಿರ್ದೇಶಕ ಮಂಜುನಾಥ್, ಕೆಪಿಸಿಸಿ ಸದಸ್ಯ ಆರ್.ಜಿ. ವೆಂಕಟಾಚಲಯ್ಯ, ಜಿ.ಲಕ್ಷ್ಮೀಪತಿ, ಯುವ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಭದ್ರಾಪುರಮೋಹನ್, ಜಿಲ್ಲಾಪ್ರಧಾನ ಕಾರ್ಯದರ್ಶಿ ದೀಪು, ಮುಖಂಡರಾದ ಆರ್.ಸಿ.ರಾಮಲಿಂಗಯ್ಯ,ವಿಜಯಕುಮಾರ್, ಕೆ.ಎ ಸ್.ಗಿರೀಶ್,ಆರ್.ವಿ.ಗೌಡ, ಸಿದ್ದಲಿಂಗಸ್ವಾಮಿ, ಮಂಜುನಾಥಸ್ವಾಮಿ, ರಂಗಧಾಮಯ್ಯ ಇದ್ದರು.

 

 

ಫ್ರೆಶ್ ನ್ಯೂಸ್

Latest Posts

Featured Videos