ಬ್ಲಾಕ್‌ ಮೇಲ್‌ ಪ್ರಕರಣ: ಸಿಸಿಬಿಯಿಂದ ಹೇಮಂತ್ ವಿಚಾರಣೆ

ಬ್ಲಾಕ್‌ ಮೇಲ್‌ ಪ್ರಕರಣ: ಸಿಸಿಬಿಯಿಂದ ಹೇಮಂತ್ ವಿಚಾರಣೆ

ಬೆಂಗಳೂರು, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ಹಣಕ್ಕಾಗಿ ರಾಜಕಾರಣಿಗಳಿಗೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಬಂಧಿತನಾಗಿರುವ ಖಾಸಗಿ ವಾಹಿನಿ ಪತ್ರಕರ್ತ ಹೇಮಂತ್‍ ರನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಅವರಿಗೆ ಹಣಕ್ಕೆ ಬೇಡಿಕೆ ಇಟ್ಟ ಕೇಸ್ ಜೊತೆಗೆ ಹಳೇ ಕೇಸ್‍ಗಳನ್ನು ಓಪನ್‍ ಮಾಡಿರುವ ಸಿಸಿಬಿ ಪೊಲೀಸರು ಹೇಮಂತ್‍ಗೆ ಸಖತ್ ಡ್ರಿಲ್‍ ಮಾಡ್ತಿದ್ದಾರೆ. ಸದ್ಯ ಸಿಸಿಬಿ ಬಲೆಗೆ ಬಿದ್ದಿರುವ ಹೇಮಂತ್ ಈ ಹಿಂದೆಯೂ ಹಲವು ಉದ್ಯಮಿಗಳಿಗೆ, ರಾಜಕಾರಣಿಗಳಿಗೆ ಬ್ಲಾಕ್‍ ಮೇಲ್ ಮಾಡಿ ಹಣ ಕಿತ್ತಿರುವುದು ವಿಚಾರಣೆ ವೇಳೆ ಬಯಲಾಗ್ತಿದೆ. ಇದೇ ವೇಳೆ ಈತನಿಂದ ಬ್ಲಾಕ್‍ ಮೇಲ್‍ಗೆ ಒಳಗಾದವರು ದೂರು ನೀಡಬಹುದು ಅಂತಾ ಪೊಲೀಸರು ಹೇಳಿದ್ದಾರೆ. ಶಾಸಕ ಅರವಿಂದ್ ಲಿಂಬಾವಳಿಯವರಿಗೆ ನಿಮ್ಮ ಖಾಸಗಿ ಬದುಕಿನ ವಿಡಿಯೋ ನನ್ನ ಬಳಿ ಇದೆ. ಇದನ್ನು ಬೇರೆ ಪಕ್ಷದವರು ಕೇಳಿದ್ರು. ಆದ್ರೆ ನಾನು ಕೊಟ್ಟಿಲ್ಲ. 50 ಲಕ್ಷ ಕೊಟ್ಟರೆ ಸಿಡಿ ಕೊಡ್ತಿನಿ ಅಂತಾ ಹೇಮಂತ್ ಬ್ಲಾಕ್‍ ಮೇಲ್‍ ಮಾಡಿದ್ದ. ಈ ಸಂಬಂಧ ವೈಟ್‍ ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಸಿಬಿ ತಂಡ ಹೇಮಂತ್ ಕಚೇರಿ ಮತ್ತು ಮನೆ ಮೇಲೆ ದಾಳಿ ನಡೆಸಿ ಲ್ಯಾಪ್‍ ಟಾಪ್, ಹಾರ್ಡ್ ಡಿಸ್ಕ್, ಮೊಬೈಲ್ ವಶಕ್ಕೆ ಪಡೆದಿತ್ತು.

ಫ್ರೆಶ್ ನ್ಯೂಸ್

Latest Posts

Featured Videos