ಕಪ್ಪುಕೂದಲಿಗೆ ಕರಿಬೇವು

ಕಪ್ಪುಕೂದಲಿಗೆ ಕರಿಬೇವು

ಬೆಂಗಳೂರು, ನ. 07: ಸಾಮಾನ್ಯವಾಗಿ ಹೆಣ್ಣು ಮಕ್ಕಳು ಸುಂದರವಾಗಿ, ಆಕರ್ಷಕವಾಗಿ ಕಾಣಬೇಕಾದರೆ ಕೂದಲಿನ ಪಾತ್ರ ಪ್ರಮುಖವಾದುದು. ಸೊಂಪಾದ ಕಪ್ಪು ಕೂದಲು ಪಡೆಯಲು ಯುವತಿಯರು ಇನ್ನಿಲ್ಲದ ಪ್ರಯತ್ನ ಪಡುತ್ತಾರೆ.

ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು, ಮೊಸರು ಸೇರಿಸಿ ರುಬ್ಬಿ ನಂತರ ಅದಕ್ಕೆ ಸ್ವಲ್ಪ ನಿಂಬೆರಸ ಹಾಕಿ ತಲೆಗೆ ಹಚ್ಚಿಕೊಂಡು 20 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಹೀಗೆ ವಾರಕ್ಕೊಮ್ಮೆ ಮಾಡುತ್ತಾ ಬಂದರೆ ಕೂದಲು ದಟ್ಟವಾಗಿ ಹಾಗೂ ಕಪ್ಪಾಗಿ ಹೊಳೆಯುತ್ತದೆ.

ಕರಿಬೇವಿನ ಎಲೆಗಳನ್ನು ದಾಸವಾಳ ಸೊಪ್ಪು, ದಾಳಿಂಬೆ ಚಿಗುರು, ಹಾಗೂ ನೆನೆಸಿಟ್ಟ ಮೆಂತ್ಯ ಕಾಳಿನ ಜೊತೆ ಚೆನ್ನಾಗಿ ರುಬ್ಬಿ ಕೂದಲಿನ ಬುಡ ಹಾಗೂ ಕೂದಲಿಗೆ ಲೇಪಿಸಿ 2 ಗಂಟೆಗಳ ನಂತರ ತೊಳೆಯಬೇಕು. ಹೀಗೆ ವಾರಕ್ಕೊಮ್ಮೆ ಮಾಡುತ್ತಿದ್ದರೆ ತಲೆ ಹೊಟ್ಟು ನಿವಾರಣೆಯಾಗಿ ಕೂದಲು ಕಪ್ಪು ಬಣ್ಣ ಪಡೆಯುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos