ರಾಜ್ಯೋತ್ಸವ ದಿನದಂದು ಎಂಇಎಸ್ ನಿಂದ ಕರಾಳ ದಿನ ಆಚರಣೆ

ರಾಜ್ಯೋತ್ಸವ ದಿನದಂದು ಎಂಇಎಸ್ ನಿಂದ ಕರಾಳ ದಿನ ಆಚರಣೆ

ಬೆಂಗಳೂರು: ಇಂದು ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದರೆ ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಎಂಇಎಸ್  ಸಂಘಟನೆ ಕರಾಳ ದಿನ ಆಚರಿಸುತ್ತಿದೆ. ಬೆಳಗಾವಿಯ ಸಂಭಾಜಿ ಉದ್ಯಾನದಿಂದ ಮೆರವಣಿಗೆ ಆರಂಭವಾಗಿದೆ. ಕಪ್ಪು ಬಟ್ಟೆ ಧರಸಿ ನೂರಾರು ಜನ ಎಂಇಎಸ್ ಪುಂಡರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರೆ. ನಾಡದ್ರೋಹಿ ಘೋಷಣೆ ಕೂಗುತ್ತಿದ್ದಾರೆ.

ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಎಂಇಎಸ್ ಮೆರವಣಿಗೆ ನಡೆಯುತ್ತಿದೆ. ಆದರೆ ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಎಂಇಎಸ್ ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿತ್ತು. ನಿಷೇಧದ ನಡುವೆಯೂ ಪೊಲೀಸ್ ಭದ್ರತೆಯಲ್ಲಿ ಕರಾಳ ದಿನ ಆಚರಿಸಲಾಗುತ್ತಿದೆ. ಕರಾಳ ದಿನಾಚರಣೆ ಮಾಡಲು ಬಿಡುವುದಿಲ್ಲ ಎಂದ ಪೊಲೀಸರೇ ಭದ್ರತೆ ನೀಡಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ನಾಡದ್ರೋಹಿ ಘೋಷಣೆ ಕೂಗಿ ಎಂಇಎಸ್ ಪುಂಡಾಟ  ಮೆರವಣಿಗೆ ನಡೆಯುತ್ತಿದೆ. ಬೆಳಗಾವಿ, ಕಾರವಾರ, ನಿಪ್ಪಾಣಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು ಅಂತಾ ಘೋಷಣೆ ಕೂಗಲಾಗುತ್ತಿದೆ.

ಕನ್ನಡದ ನೆಲದಲ್ಲಿದ್ರೂ ನಾಡದ್ರೋಹಿ ಘೋಷಣೆ ಕೂಗಿ ಎಂಇಎಸ್ ಪುಂಡಾಟ ಮೆರೆಯುತ್ತಿದೆ. ಇದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪರೋಕ್ಷವಾಗಿ ಸಪೋರ್ಟ್ ಮಾಡುತ್ತಿದ್ದು ರಾಜಕೀಯ ಒತ್ತಡಕ್ಕೆ ಮಣಿದು ಸುಮ್ಮನಾದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಕರಾಳ ದಿನಾಚರಣೆ ಬಂದ್ ಮಾಡುವ ಪವರ್ ಇದ್ರೂ ಪೊಲೀಸ್ ಇಲಾಖೆ ಸೈಲೆಂಟ್ ಆಗಿದೆ ಎಂದು ಕನ್ನಡಿಗರು ಆರೋಪಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos