15 ದಿನಗಳಾದರೂ ಸರಿಯಾಗದ ಬಿಜೆಪಿ ವೆಬ್ಸೈಟ್

15 ದಿನಗಳಾದರೂ ಸರಿಯಾಗದ ಬಿಜೆಪಿ ವೆಬ್ಸೈಟ್

ನವದೆಹಲಿ, ಮಾ.21, ನ್ಯೂಸ್ ಎಕ್ಸ್ ಪ್ರೆಸ್: ಬಿಜೆಪಿಯ ಅಧಿಕೃತ ವೆಬ್ಸೈಟ್ ಹ್ಯಾಕರ್ಗಳ ಕೃತ್ಯಕ್ಕೆ ಬಲಿಯಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿ 15 ದಿನ ಕಳೆದರೂ ಕೂಡ ಇನ್ನೂ ಸರಿಯಾಗಿಲ್ಲ.

ಹ್ಯಾಕರ್ ದಾಳಿಯಿಂದ ವೆಬ್ಸೈಟ್ನಲ್ಲಿದ್ದ ಅಪಾರ ಪ್ರಮಾಣದ ಮಾಹಿತಿ ನಷ್ಟವಾಗಿದೆ.

ಈ ಕಾರಣದಿಂದ ವೆಬ್ಸೈಟ್ಅನ್ನು ಸರಿಪಡಿಸಿ ಮತ್ತೆ ಅಂತರ್ಜಾಲದಲ್ಲಿ ಲಭ್ಯವಾಗುವಂತೆ ಮಾಡಲು ಇನ್ನೂ ಸಾಧ್ಯವಾಗಿಲ್ಲ ಎಂದು ಸೈಬರ್ ಭದ್ರತಾ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯ ವೆಬ್ಸೈಟ್ ಮಾ. 5ರಂದು ಹ್ಯಾಕ್ ಆಗಿತ್ತು. ಆಗ ವೆಬ್ಸೈಟ್ನ ಮುಖಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿಯ ಚಾನ್ಸೆಲರ್ ಆಂಜೆಲಾ ಮರ್ಕೆಲ್ ಅವರ ಮೀಮ್ ಅನ್ನು ತೋರಿಸುತ್ತಿತ್ತು.

ಬಳಿಕ ವೆಬ್ಸೈಟ್ನಲ್ಲಿದ್ದ ಚಿತ್ರವನ್ನು ತೆಗೆದುಹಾಕಿ ಪಕ್ಷವು ವೆಬ್ಸೈಟ್ನ ನಿರ್ವಹಣಾ ಕಾರ್ಯ ನಡೆಸುತ್ತಿದ್ದು, ಶೀಘ್ರದಲ್ಲಿಯೇ ವೆಬ್ಸೈಟ್ ಮರಳಲಿದೆ ಎಂಬ ಸಂದೇಶ ಪ್ರಕಟಿಸಲಾಗಿದೆ.

ಆದರೆ,ಇಲ್ಲಿವರೆಗೂ ಯಾವುದೇ ಹ್ಯಾಕರ್ಗಳ ಗುಂಪು ಇದಕ್ಕೆ ತಾನೇ ಕಾರಣ ಎಂದು ಹೊಣೆಗಾರಿಕೆ ವಹಿಸಿಕೊಂಡಿಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos