ಬಿಜೆಪಿ-ಶಿವಸೇನೆ ಮತ್ತೆ ಒಂದಾಗಿ ಪ್ರಚಾರ ಶುರು

ಬಿಜೆಪಿ-ಶಿವಸೇನೆ ಮತ್ತೆ ಒಂದಾಗಿ ಪ್ರಚಾರ ಶುರು

ಮುಂಬೈ,ಮಾ.15, ನ್ಯೂಸ್ ಎಕ್ಸ್ ಪ್ರೆಸ್: ಯಾವಗಲು ಹಾವು-ಮುಂಗುಸಿ ತರ ಕಚ್ಚಾಡುತ್ತಿದ್ದ ಬಿಜೆಪಿ-ಶಿವಸೇನೆ ಇಂದು ಒಂದಾಗಿ, ಇದೀಗ ಒಟ್ಟಿಗೇ ಪ್ರಚಾರ ನಡೆಸಲು ನಿರ್ಧರಿಸಿವೆ.

ಏಪ್ರಿಲ್ ನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಮಾರ್ಚ್ 24 ರಿಂದ ಕೊಲ್ಹಾಪುರದಿಂದ ಜಂಟಿ ಪ್ರಚಾರ ಆರಂಭವಾಗಲಿದ್ದು, ಅದಕ್ಕೂ ಮುನ್ನ ಪಕ್ಶಃದ ಮುಖಂಡರು, ಕಾರ್ಯಕರ್ತರ ಸಭೆ ನಡೆಯಲಿದೆ. ಮಾರ್ಚ್ 15, 17, 18 ರಂದು ಬೇರೆ ಬೇರೆ ಸ್ಥಳಗಳಲ್ಲಿ ಸಭೆ ನಡೆಯಲಿದ್ದು, ಈ ಸಭೆಗಳು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನೇತೃತ್ವದಲ್ಲಿ ನಡೆಯಲಿದೆ.

ಮಹಾರಾಷ್ಟ್ರದ ಒಟ್ಟು 48 ಲೋಕಸಭಾ ಕ್ಷೇತ್ರಗಳಲ್ಲಿ 25 ರಲ್ಲಿ ಬಿಜೆಪಿ ಮತ್ತು 23 ರಲ್ಲಿ ಶಿವಸೇನೆ ಕಣಕ್ಕಿಳಿಯಲಿವೆ.

ಕಳೆದ ಹಲವು ದಶಕಗಳಿಂದಲೂ ಬಿಜೆಪಿ-ಶಿವಸೇನೆ ಮೈತ್ರಿ ಮಾಡಿಕೊಂಡೇ ಚುನಾವಣೆ ಎದುರಿಸಿವೆ. ಆದರೆ ಕೆಲದಿನಗಳಿಂದ ಬಿಜೆಪಿ ನಾಯಕತ್ವದ ಕುರಿತು ಕೆಲವು ವೈಮನಸ್ಯವಿದ್ದಿದ್ದರಿಂದ ಅದು ಈ ಬಾರಿ ಎನ್ ಡಿಎ ಯಿಂದ ದೂರವುಳಿಯುವ ಮಾತನ್ನು ಹಲವು ಬಾರಿ ಆಡಿತ್ತು. ಆದರೆ ಕೊನೆಯೇ ಕ್ಷಣಗಳಲ್ಲಿ ಮತ್ತೆ ಎನ್ ಡಿಎ ಜೊತೆಯೇ ಚುನಾವನೆ ಎದುರಿಸುವ ನಿರ್ಧಾರವನ್ನು ಶಿವಸೇನೆ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos