ಬಿಜೆಪಿ ಶತ್ರು, ಕಾಂಗ್ರೆಸ್ ಗೆ ಮಿತ್ರ

ಬಿಜೆಪಿ ಶತ್ರು, ಕಾಂಗ್ರೆಸ್ ಗೆ ಮಿತ್ರ

ನವದೆಹಲಿ, ಮಾ. 28, ನ್ಯೂಸ್ ಎಕ್ಸ್ ಪ್ರೆಸ್: ಇಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನ ಹಿರಿಯ ನಟ, ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಭೇಟಿ ಮಾಡಿದರು. ಈ ವೇಳೆ, ತಾವು ಕಾಂಗ್ರೆಸ್ ಪಕ್ಷವನ್ನು ಸೇರಿದಿರಾ? ಎಂದು ಸುದ್ದಿಗಾರರು ಕೇಳಿದಾಗ ಈಗಾಗಲೇ ಆ ಪಕ್ಷದಲ್ಲಿದ್ದೇನೆ. ಪಕ್ಷ ಸೇರ್ಪಡೆ ಏಪ್ರಿಲ್ ನಲ್ಲಿ ನಡೆಯುತ್ತದೆ ಎಂದು 72 ವರ್ಷದ ಶತ್ರುಘ್ನ ಸಿನ್ಹಾ ತಿಳಿಸಿದರು.

ಈ ಹಿಂದೆ ಬಿಜೆಪಿ ಪಕ್ಷದಲ್ಲಿದ್ದ ಶತ್ರುಘ್ನ ಸಿನ್ಹಾ, ಲೋಕಸಭೆ-ರಾಜ್ಯಸಭೆಗಳ ಸದಸ್ಯರಾಗಿದ್ದರು. ವಾಜಪೇಯಿ ಸರ್ಕಾರದಲ್ಲಿ ಸಚಿವ ಸ್ಥಾನ ಅನುಭವಿಸಿದ್ದರು. ಅದಾದ ಬಳಿಕ ಪ್ರಧಾನಿ ಮೋದಿ ಅವರ ಕಟುವಿರೋಧಿಯಾಗಿ ಪರಿವರ್ತಿತರಾಗಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos