ಬಿಜೆಪಿ ಸೇರಿದ ಸಚಿವಗೆ ಹೊಸ ಪಟ್ಟ

ಬಿಜೆಪಿ ಸೇರಿದ ಸಚಿವಗೆ ಹೊಸ ಪಟ್ಟ

ಪಣಜಿ, ಮಾ. 29, ನ್ಯೂಸ್ ಎಕ್ಸ್ ಪ್ರೆಸ್: ಪ್ರವಾಸೋದ್ಯಮ ಸಚಿವ ಮನೋಹರ್ ಅಜಗಾಂವ್ಕರ್ ರವರು ಮಾ. 27ರಂದು ಎಂಜಿಪಿ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಅವರನ್ನು ಗೋವಾದ ಉಪಮುಖ್ಯಮಂತ್ರಿಯಾಗಿ ನಿಯೋಜಿಸಲಾಗಿದೆ.

ಇದರೊಂದಿಗೆ ರಾಜ್ಯದಲ್ಲಿ 2ನೇ ಡಿಸಿಎಂ ನೇಮಕವಾಗಿದೆ. ಈಗಾಗಲೇ ಜಿಎಫ್ಪಿಯ ವಿಜಯ್ ಸರ್ದೇಸಾಯಿ ಅವರನ್ನು ಡಿಸಿಎಂ ಆಗಿ ನೇಮಕ ಮಾಡಲಾಗಿದೆ.

ಈ ಕುರಿತು ರಾಜ್ಯ ಸರ್ಕಾರ ನೆನ್ನೆ ಆದೇಶ ಹೊರಡಿಸಿದೆ. ಇದಕ್ಕೂ ಮೊದಲು ಡಿಸಿಎಂ ಆಗಿದ್ದ ಎಂಜಿಪಿಯ ಧಾವಳೀಕರನ್ನು ಸರ್ಕಾರ, ಸರ್ಕಾರದ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಹುದ್ದೆಯಿಂದ ಕಿತ್ತುಹಾಕಿತ್ತು.

ಫ್ರೆಶ್ ನ್ಯೂಸ್

Latest Posts

Featured Videos