ಕೇಂದ್ರದಲ್ಲಿ ಬಹುಮತ ಬಿಜೆಪಿಗೇ “ಗ್ಯಾರಂಟಿಯಿಲ್ಲ”

ಕೇಂದ್ರದಲ್ಲಿ ಬಹುಮತ ಬಿಜೆಪಿಗೇ “ಗ್ಯಾರಂಟಿಯಿಲ್ಲ”

ನವದೆಹಲಿ, ಮೇ.7, ನ್ಯೂಸ್ ಎಕ್ಸ್ ಪ್ರೆಸ್: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುವುದು ಬಿಜೆಪಿಗೇ ಗ್ಯಾರಂಟಿಯಿಲ್ಲ ಎನ್ನುವ ಮಾತು ಪಕ್ಷದ ಪ್ರಧಾನ ಕಾರ್ಯದರ್ಶಿಯ ಹೇಳಿಕೆಯಿಂದ ವ್ಯಕ್ತವಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಕಳೆದ ಚುನಾವಣೆಯಲ್ಲಿ ಉತ್ತರ ಭಾರತದಲ್ಲಿ ಪಕ್ಷ ಉತ್ತಮ ಸಾಧನೆಯನ್ನು ಮಾಡಿತ್ತು, ಅದು ಈ ಬಾರಿ ಪುನಾರಾವರ್ತನೆ ಆಗುವ ಸಾಧ್ಯತೆ ಕಮ್ಮಿ ಎಂದು ಹೇಳಿದ್ದಾರೆ. ನಾವೊಬ್ಬರೇ 271ಸೀಟನ್ನು ಪಡೆದಿದ್ದೇ ಆದಲ್ಲಿ ಪಕ್ಷಕ್ಕೆ ಅದಕ್ಕಿಂತ ದೊಡ್ಡ ಸಂತೋಷದ ವಿಷಯ ಇನ್ನೊಂದಿಲ್ಲ. ಆದರೆ, ಬಿಜೆಪಿಗೆ ಸರಳ ಬಹುಮತ ಸಿಗುವ ಸಾಧ್ಯತೆ ಕಮ್ಮಿ ಎನ್ನುವ ಅಭಿಪ್ರಾಯವನ್ನು ರಾಮ್ ಮಾಧವ್ ವ್ಯಕ್ತ ಪಡಿಸಿದ್ದಾರೆ. ಉತ್ತರ ಭಾರತದಲ್ಲಾಗಬಹುದಾದ ಹಿನ್ನಡೆಯನ್ನು ಈಶಾನ್ಯ ಮತ್ತು ಪೂರ್ವ ಭಾರತದಲ್ಲಿ ಸರಿಪಡಿಸುವ ವಿಶ್ವಾಸ ನಮಗಿದೆ. ಬಹುಮತಕ್ಕೆ ಬೇಕಾಗುವ ನಂಬರ್ ಸಿಗದೇ ಇದ್ದರೂ, ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಅಧಿಕಾರಕ್ಕೆ ಬರುವುದಂತೂ ನಿಶ್ಚಿತ ಎನ್ನುವ ಮಾತನ್ನು ರಾಮ್ ಮಾಧವ್ ಆಡಿದ್ದಾರೆ. ಮಿತ್ರ ಪಕ್ಷಗಳ ಮತ್ತು ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಉತ್ತಮ ಸಾಧನೆಯನ್ನು ಮಾಡಬಹುದು ಎನ್ನುವ ನಿರೀಕ್ಷೆಯಿದೆ ಎಂದು ರಾಮ್ ಮಾಧವ್ ಹೇಳಿದ್ದಾರೆ. 545 ಸದಸ್ಯ ಬಲದ ಲೋಕಸಭೆಯಲ್ಲಿ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲು 272 ಸ್ಥಾನವನ್ನು ಗೆಲ್ಲಬೇಕಿದೆ. 2014ರ ಚುನಾವಣೆಯಲ್ಲಿ ಬಿಜೆಪಿಯೊಂದೇ 282 ಸ್ಥಾನವನ್ನು ಪಡೆದಿತ್ತು. ಎನ್ಡಿಎ ಮೈತ್ರಿಕೂಟದ ಒಟ್ಟು ಬಲ 336 ಆಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos