ಬಿಜೆಪಿ ಪುಲ್ವಾಮ ಪ್ರಕರಣವನ್ನು ರಾಜಕೀಯಗೊಳಿಸುತ್ತಿದೆ: ಸೀತಾರಾಮ್ ಯೆಚೂರಿ

ಬಿಜೆಪಿ ಪುಲ್ವಾಮ ಪ್ರಕರಣವನ್ನು ರಾಜಕೀಯಗೊಳಿಸುತ್ತಿದೆ: ಸೀತಾರಾಮ್ ಯೆಚೂರಿ

ಕಾಸರಗೋಡು: ಬಿಜೆಪಿ ಪುಲ್ವಾಮ ಉಗ್ರರ ದಾಳಿಯನ್ನು ರಾಜಕೀಯಗೊಳಿಸುತ್ತಿದೆ ಎಂದು ಸಿಪಿಐಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಆಕ್ರೋಶ
ವ್ಯಕ್ತಪಡಿಸಿದ್ದಾರೆ.

ಕೇರಳದ ಉಪ್ಪಳದಿಂದ ಹೊರಡಲಿರುವ ಎಲ್.ಡಿ.ಎಫ್ ನೇತೃತ್ವದ ಜನಸಂರಕ್ಷಣಾ ಯಾತ್ರೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ಕಾಸರಗೋಡಿಗೆ ಆಗಮಿಸಿದ ಅವರು ಮಂಜೇಶ್ವರ ಸರಕಾರಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಇಲ್ಲ. ಬಿಜೆಪಿ ಮತ್ತು ಟಿಎಂಸಿ ಪಕ್ಷವನ್ನು ಸೋಲಿಸುವುದೇ ಸಿಪಿಎಂ ಗುರಿಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಎಡಪಕ್ಷ ಒಂದು ಶಕ್ತಿಯಾಗಿ ಹೊರಹೊಮ್ಮಲಿದೆ. 2004ರ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪುರುಷ ಮಹಿಳೆ ಸಮಾನತೆ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ಶಬರಿಮಲೆ ದೇವಳಕ್ಕೆ ಮಹಿಳೆಯವರ ಪ್ರವೇಶಕ್ಕೆ ಯಾಕೆ ಅಡ್ಡಿಯಾಗುತ್ತಿದೆ ಎಂದು ಸೀತಾರಾಮ್‍ ಯೆಚೂರಿ
ಪ್ರಶ್ನಿಸಿದರು.

ತ್ರಿವಳಿ ತಲಾಕ್ ಮಸೂದೆ ಜಾರಿ ಮಾಡುವಾಗ ಮಹಿಳೆ ಪುರುಷರು ಸಮಾನರು ಎಂದು ಹೇಳುವ ಬಿಜೆಪಿ, ಶಬರಿಮಲೆ ವಿಷಯದಲ್ಲಿ ದ್ವಂದ್ವ ನಿಲುವು ತಳೆಯುತ್ತಿದೆ. ಮತ ಗಳಿಸಲು ಇಂತಹ ವಿಷಯವನ್ನು ಅದು ರಾಜಕೀಯಗೊಳಿಸುತ್ತಿದೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos