ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ: ಎನ್.ಎಸ್.ನಂದೀಶ್ ರೆಡ್ಡಿ

ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ: ಎನ್.ಎಸ್.ನಂದೀಶ್ ರೆಡ್ಡಿ

ಕೆ.ಆರ್.ಪುರ, ನ. 08: ಈಗಲೂ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಟಿಕೆಟ್ ಸಿಗುತ್ತದೆ ಎನ್ನುವ ವಿಶ್ವಾಸದಲ್ಲಿದ್ದೇನೆ ಎಂದು ನೂತನ ಬಿಎಂಟಿಸಿ ಅಧ್ಯಕ್ಷ ಎನ್.ಎಸ್.ನಂದೀಶ್ ರೆಡ್ಡಿ ತಿಳಿಸಿದರು. ಬಿಎಂಟಿಸಿ ಅಧ್ಯಕ್ಷರಾಗಿ ಪದಗ್ರಹಣಕ್ಕೂ ಮುಂಚೆ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಕ್ಷದ ರಾಜ್ಯಧ್ಯಕ್ಷರು, ಮುಖ್ಯಮಂತ್ರಿಗಳು ಹಾಗೂ ಹಿರಿಯ ವರಿಷ್ಠರು ಬಿಎಂಟಿಸಿ ಅಧ್ಯಕ್ಷ ಹುದ್ದೆಯನ್ನು ನೀಡಿದ್ದಾರೆ. ಪಕ್ಷ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದು ನನ್ನ ಜವಾಬ್ದಾರಿ. ಪಕ್ಷದ ವರಿಷ್ಠರು ಮನವೊಲಿಸಿದರು ಎನ್ನುವುದ್ದಕ್ಕಿಂತ ಪಕ್ಷದ ಸಿದ್ದಾಂತಕ್ಕೆ ತಲೆಬಾಗಿದ್ದೇನೆ.

ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಯಾವುದೇ ನಿರ್ಧಾರಕ್ಕೆ ತಲೆಬಾಗುತ್ತೇನೆ. ಬಿಜೆಪಿ ಪಕ್ಷ ಶಿಸ್ತನ್ನು ಕಲಿಸಿದೆ. ಪಕ್ಷ ನೀಡಿರುವ ಹುದ್ದೆಯನ್ನು ಸ್ವೀಕರಿಸಲು ಬದ್ದವಾಗಿದ್ದೇನೆ. ಟಿಕೆಟ್ ನೀಡಿದರೆ ಗೆಲುವು ಸಾಧಿಸುತ್ತೇನೆ. ಟಿಕೆಟ್ ಸಿಗದೇ ಇದ್ದ ಪಕ್ಷದಲ್ಲಿ ಯಾರೆ ಅಭ್ಯರ್ಥಿಯಾದರೂ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಕೆ.ಆರ್.ಪುರ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದರು.

ನಂದೀಶ್ ರೆಡ್ಡಿಯವರು ಪದಗ್ರಹಣ ಸಮಾರಂಭಕ್ಕೆ ಮಾರುತ್ತಹಳ್ಳಿಯ ತಮ್ಮ ಮನೆಯಿಂದ ಬಿಎಂಟಿಸಿ ಬಸ್ ನಲ್ಲಿ ತಮ್ಮ ಮುಖಂಡರೊಂದಿಗೆ ಶಾಂತಿನಗರದ ಕಚೇರಿಗೆ ತೆರಳಿದರು. ನಂದೀಶ್ ರೆಡ್ಡಿ ಯವರು ಸ್ವತಃ 3762 ರೂ ಹಣವನ್ನು ಬಿಎಂಟಿಸಿ ಕಚೇರಿಯಲ್ಲಿ ಪಾವತಿಸಿದ್ದರು. ಪದಗ್ರಹಣ ಸಮಾರಂಭದ ಖರ್ಚುವೆಚ್ಚವನ್ನು ನಂದೀಶ್ ರೆಡ್ಡಿಯವರೆ ಭರಿಸಿದ್ದಾರೆ.

ಬಿಎಂಟಿಸಿ ಸಂಸ್ಥೆ ನಷ್ಟದಲ್ಲಿರುವುದರಿಂದ ಸಮಾರಂಭದ ಖರ್ಚು ವೆಚ್ಚ ಹಾಗೂ ಸಮಾರಂಭಕ್ಕೆ ಕರೆತಂದ ಬಸ್ ಗೆ ಟಿಕೆಟ್ ಹಣವನ್ನು ಸ್ವಂತ ಖರ್ಚಿನಲ್ಲಿ ಪಾವತಿಸಿದ್ದೇನೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos