ಜಿಎಸ್‌ಟಿ ಪಾಲು ಬಾಯಿ ಬಿಡದ ಬಿಜೆಪಿ ಸಂಸದರು

ಜಿಎಸ್‌ಟಿ ಪಾಲು ಬಾಯಿ ಬಿಡದ ಬಿಜೆಪಿ ಸಂಸದರು

ತುಮಕೂರು: ಜಿಎಸ್‌ಟಿ ಪಾಲು ಸೇರಿ ಕೇಂದ್ರದಿಂದ ಕರ್ನಾಟಕಕ್ಕೆ ಬರಬೇಕಾದ ಅನುದಾನ ನೀಡುವಲ್ಲಿ ಅನ್ಯಾಯವಾಗಿದ್ದರೂ ಬಿಜೆಪಿ ಸಂಸದರು ಮೌನವಾಗಿರುವುದು ರಾಜ್ಯದ ಜನರಿಗೆ ಮಾಡುತ್ತಿರುವ ಅನ್ಯಾಯ ಎಂದು ಮಾಜಿ ಸಂಸದ, ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮದ ಅಧ್ಯಕ್ಷ ಆರ್.ಧ್ರುವನಾರಾಯಣ ಹರಿಹಾಯ್ದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಕ್ಕೆ ಜಿಎಸ್‌ಟಿ ಪಾಲು ೧೩೬೭೨ ಕೋಟಿ ರೂ.ಬರಬೇಕು. ಅಲ್ಲದೆ ಎನ್‌ಆರ್‌ಇಜಿಎ ಸೇರಿ ಹಲವು ಯೋಜನೆಗಳ ವ್ಯಾಚಿಂಗ್ ಗ್ರಾಂಟ್ ಬಾಕಿ ಇದೆ. ರಾಜ್ಯದವರೇ ಹಣಕಾಸು ಸಚಿವರಾಗಿದ್ದರೂ ಪ್ರಯೋಜನವಾಗಿಲ್ಲ ಎಂದರು.

ಕೊರೋನಾ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನವಿಲ್ಲದೆ ಕಂಗಾಲಾಗಿದ್ದ ಜನರ ನೆರವಿಗೆ ಧಾವಿಸಲು ಕೆಪಿಸಿಸಿ ಕಾರ್ಯಕ್ರಮ ರೂಪಿಸಿದ್ದು ನಮ್ಮ ೧೫ ಸಾವಿರ ಕಾರ್ಯಕರ್ತರು ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರಗಳಿಂದ ಕೊರೋನಾ ವಾರಿಯರ್ಸ್ ಕೆಲಸ ಮಾಡುತ್ತಿದ್ದಾರೆ ಎಂದರು.

ನಮ್ಮ ವಾರಿಯರ್ಸ್ಗಳಿಗೆ ೪೫೦೦ ರೂ. ಮೌಲ್ಯದ ೭೫೦೦ ಆರೋಗ್ಯ ಕಿಟ್‌ಗಳನ್ನು ವಿತರಿಸಲಾಗಿದೆ. ವಾರಿಯರ್ಸ್ಗಳು ಜಿಲ್ಲೆಯ ಪ್ರತಿ ಮನೆಗೆ ಭೇಟಿ ನೀಡಿ, ಅವರನ್ನು ಪರೀಕ್ಷಿಸಿ ಅವರಿಗೆ ಸೂಕ್ತ ವಾರ್ಗದರ್ಶನ ನೀಡುತ್ತಿದ್ದಾರೆ ಎಂದರು.

ಸ್ಥಳೀಯ ಮುಖಂಡರ ಗೈರು!  ಕೆಪಿಸಿಸಿ ವತಿಯಿಂದ ರೂಪಿಸಿರುವ ಕಾರ್ಯಕ್ರಮದ ಅಧ್ಯಕ್ಷರೇ ಜಿಲ್ಲೆಗೆ ಆಗಮಿಸಿದ್ದರೂ ಜಿಲ್ಲೆಯ ಪ್ರಮುಖ ನಾಯಕರು ಕಾಂಗ್ರೆಸ್ ಕಚೇರಿಗೆ ಆಗಮಿಸದೇ ಇದ್ದುದು ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸಾರಿತು. ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಟಿ.ಬಿ.ಜಯಚಂದ್ರ ಜತೆಗೆ ಆರ್. ಧ್ರುವನಾರಾಯಣ, ಬಿ.ಎನ್.ಚಂದ್ರಪ್ಪ ಅವರ ಒಡನಾಡಿಯೂ ಆಗಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಸೇರಿ ಮುಂಚೂಣಿ ನಾಯಕರು ಗೈರಾಗಿದ್ದು ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿಲ್ಲ ಎಂಬುದನ್ನು ಮತ್ತೊಮ್ಮೆ ಬಹಿರಂಗಪಡಿಸಿತು. ಮಾಜಿ ಶಾಸಕರಾದ ಡಾ.ರಫೀಕ್ ಅಹ್ಮದ್, ಆರ್.ನಾರಾಯಣ ಮಾತ್ರ ಸಭೆಯಲ್ಲಿ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos