ಮತ್ತೆ ಬಿಜೆಪಿ ಮೇ 23ರ ನಂತರ ಅಧಿಕಾರಕ್ಕೆ ಬರುತ್ತೆ: ಈಶ್ವರಪ್ಪ

ಮತ್ತೆ ಬಿಜೆಪಿ ಮೇ 23ರ ನಂತರ ಅಧಿಕಾರಕ್ಕೆ ಬರುತ್ತೆ: ಈಶ್ವರಪ್ಪ

ಬಾಗಲಕೋಟೆ, ಮೇ. 13, ನ್ಯೂಸ್ ಎಕ್ಸ್ ಪ್ರೆಸ್: ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ಮುಖಂಡ, ಡಿಸಿಎಂ ಕೆ ಎಸ್ ಈಶ್ವರಪ್ಪ ಅವರು ಹೇಳಿದ್ದಾರೆ.

ಮೇ 23ರ ನಂತರ ನಮ್ಮ ಬಿಜೆಪಿ ಸಂಖ್ಯೆ 104ರಿಂದ 106ಕ್ಕೆ ಏರಿಕೆಯಾಗಲಿದೆ.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಕೆ ಎಸ್ ಈಶ್ವರಪ್ಪ, ರಾಜ್ಯದ ಜನರ ಭಾವನೆ ಬಿಜೆಪಿ ಪರವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಬಿಜೆಪಿ ಪಡೆಯಲಿದೆ. ಇದರ ಜೊತೆಗೆ ಕುಂದಗೋಳ, ಚಿಂಚೋಳಿ ಉಪಚುನಾವಣೆಯ 2 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

ಬಿಜೆಪಿಯ ವಿಧಾನಸಭಾ ಸಂಖ್ಯಾ ಬಲ ಸದ್ಯಕ್ಕೆ 104 ಇದೆ. ಈ ಸ್ಥಾನಗಳ ಸಂಖ್ಯೆ, ಕಾಂಗ್ರೆಸ್ -ಜೆಡಿಎಸ್ ಪಕ್ಷದ ಅತೃಪ್ತ ಶಾಸಕರು ಬಿಜೆಪಿ ಸೇರುವ ಮೂಲಕ, ಮೇ. 23ರ ನಂತರ 106ಕ್ಕೆ ಏರಿಕೆ ಆಗಲಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕೆ ಎಸ್ ಈಶ್ವರಪ್ಪ ಭವಿಷ್ಯ ನುಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos