ಬೈಎಲೆಕ್ಷನ್ ಬಳಿಕ ಬಿಜೆಪಿಗೆ ಸಂಕಷ್ಟ: ಸಿದ್ಧರಾಮಯ್ಯ

ಬೈಎಲೆಕ್ಷನ್ ಬಳಿಕ ಬಿಜೆಪಿಗೆ ಸಂಕಷ್ಟ: ಸಿದ್ಧರಾಮಯ್ಯ

ಬೆಂಗಳೂರು, ನ. 16: ಜಾತ್ಯತೀತ ಜನತಾದಳಕ್ಕೆ ಯಾವುದೇ ನಿಲುವು ಇಲ್ಲ. ಯಾವುದೇ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ನಿಲುವು ಇರುವುದಿಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ನಿಲುವಿನಿಂದಾಗಿ ಬಿಜೆಪಿಗೆ ಲಾಭವಾಗುತ್ತದೆ ಎಂದು ಹೇಳಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿಯವರು 8 ಸ್ಥಾನ ಗೆಲ್ಲುವುದಿಲ್ಲ. ಉಪಚುನಾವಣೆ ಬಳಿಕ ಬಿಜೆಪಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಅಕ್ರಮ ಎಸಗಲು ಬಿಜೆಪಿಯವರು ಸಜ್ಜಾಗಿದ್ದಾರೆ ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸಿ.ಪಿ. ಯೋಗೇಶ್ವರ್ ಫೋಟೋ ಇರುವ ಸೀರೆಗಳು ಸಿಕ್ಕಿವೆ. ಇದೆಲ್ಲವೂ ಚುನಾವಣೆ ಅಕ್ರಮವನ್ನು ತೋರಿಸುತ್ತದೆ ಚುನಾವಣಾ ಆಯೋಗ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅನರ್ಹರನ್ನು ಮಂತ್ರಿ ಮಾಡುವುದಾಗಿ ಸಿಎಂ ಹೇಳಿದ್ದು, ಚುನಾವಣೆ ನೀತಿಸಂಹಿತೆ ವ್ಯಾಪ್ತಿಗೆ ಬರುವುದಿಲ್ಲವೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಗೆ ಯಾವುದೇ ನೀತಿಸಂಹಿತೆ ಅಡ್ಡಿ ಇರುವುದಿಲ್ಲವೇ? ಇಂತಹ ಮಾತುಗಳಿಂದ ಚುನಾವಣೆ ಎದುರಿಸಲು ಬಿಜೆಪಿ ಸಜ್ಜಾಗಿದೆ ಎಂದು ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos