ಬಿಜೆಪಿ-ಕಾಂಗ್ರೆಸ್ ತೀವ್ರ ಪೈಪೋಟಿ

ಬಿಜೆಪಿ-ಕಾಂಗ್ರೆಸ್  ತೀವ್ರ ಪೈಪೋಟಿ

ಚಂಡೀಗಢ, ಅ. 24: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಹರಿಯಾಣ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಯಾವುದೇ ಪಕ್ಷಕ್ಕೆ ಸರ್ಕಾರ ರಚನೆಗೆ ಅಗತ್ಯವಾದಷ್ಟು ಸ್ಪಷ್ಟ ಬಹುಮತ ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಅನ್ಯ ಪಕ್ಷಗಳ ಬೆಂಬಲ ಪಡೆದು ಸರ್ಕಾರ ರಚಿಸಲು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಸರ್ಕಾರ ರಚನೆಗೆ ಭಾರೀ ಪೈಪೋಟಿ ನಡೆಸುತ್ತಿವೆ.

90 ಸದಸ್ಯ ಬಲದ ಹರಿಯಾಣದಲ್ಲಿ ಸರ್ಕಾರ ರಚಿಸಲು 46 ಸ್ಥಾನಗಳ ಅಗತ್ಯವಿದೆ. ಆದರೆ ಮುಖ್ಯಮಂತ್ರಿ ಮನೋಹರ್ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ 44 ಸ್ಥಾನಗಳನ್ನು ಗಳಿಸಿದ್ದು, ಮ್ಯಾಜಿಕ್ ನಂಬರ್ಗೆ ಕೇವಲ 2 ಸ್ಥಾನಗಳ ಕೊರತೆ ಇದೆ. ಕಾಂಗ್ರೆಸ್ 29 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಿದೆ. ಯುವನಾಯಕ ದುಷ್ಯಂತ್ ಚೌತಾಲಾ ನಾಯಕತ್ವದ ಜನನಾಯಕ ಜನತಾ ಪಕ್ಷ(ಜೆಜೆಪಿ) 8 ಸ್ಥಾನಗಳನ್ನು ಗಳಿಸಿ ಅಚ್ಚರಿ ಫಲಿತಾಂಶ ನೀಡಿದೆ. ಪಕ್ಷೇತರರು 9 ಸ್ಥಾನಗಳಲ್ಲಿ ಜಯಶೀಲರಾಗಿದ್ದಾರೆ.

ಹರಿಯಾಣದಲ್ಲಿ ಶತಾಯ-ಗತಾಯ ಸರ್ಕಾರ ರಚಿಸುವ ಉಮೇದಿನಲ್ಲಿರುವ ಬಿಜೆಪಿ, ಜೆಜೆಪಿ ಜೊತೆ ಕೈಜೋಡಿಸಲು ಮುಂದಾಗಿದ್ದರೆ, ಇನ್ನೊಂದಡೆ ಜೆಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಸಹ ತೀವ್ರ ಕಸರತ್ತು ನಡೆಸಿದೆ. ಈ ಸಂಬಂಧ ದುಷ್ಯಂತ್ ಮನವೊಲಿಸಲು ಬಿಜೆಪಿ ತನ್ನ ಮಿತ್ರ ಪಕ್ಷ ಅಕಾಲಿದಳ ಬಾದಲ್ ಬಣದ ಮುಖಂಡರಿಗೆ ಇದರ ಹೊಣೆಯನ್ನು ಒಪ್ಪಿಸಿದೆ. ಇನ್ನೊಂದೆಡೆ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಧುರೀಣ ಭೂಪಿಂದರ ಸಿಂಗ್ ಹೂಡಾ ಅವರ ಪುತ್ರ ದೀಪಿಂದರ್ ಹೂಡಾ. ತಾವು ದುಷ್ಯಂತ್ ಜೊತೆ ಮಾತನಾಡಲು ಮುಂದಾಗಿದ್ದಾರೆ. ಆದರೆ ದುಷ್ಯಂತ್ ಚೌತಾಲಾ ಇಟ್ಟಿರುವ ಹೊಸ ಬೇಡಿಕೆ ಬಿಜೆಪಿ ಮತ್ತು ಕಾಂಗ್ರೆಸ್ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos