ನಾಳೆಯಿಂದ ಬಿಜೆಪಿ ಪ್ರಚಾರ

ನಾಳೆಯಿಂದ ಬಿಜೆಪಿ ಪ್ರಚಾರ

ಬೆಂಗಳೂರು, ನ.22 : ಉಪಚುನಾವಣೆ ಹಿನ್ನೆಲೆ ಸಿಎಂ ಬಿ.ಎಸ್.ಯಡಿಯೂರಪ್ಪ ಉ.ಕ ಭಾಗದಿಂದ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ದಕ್ಷಿಣ ಭಾಗದಿಂದ ಪ್ರಚಾರ ಪ್ರವಾಸ ಆರಂಭಿಸಲಿದ್ದು, ಸಾರ್ವಜನಿಕ ಸಭೆ, ಕಾರ್ಯಕರ್ತರ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
33 ವರ್ಷಗಳ ಬಳಿಕ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ಗಳಿವೆ. ರಾಜ್ಯ ಸರಕಾರವನ್ನು ಸುಸ್ಥಿರಗೊಳಿಸಲು ಮತ ನೀಡುವಂತೆ ಮನವಿ ಮಾಡಲಾಗುವುದು ಎಂದು ಉಪ ಚುನಾವಣ ಉಸ್ತುವಾರಿಯಾದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಉಪಚುನಾವಣೆಗೆ ಬಿಜೆಪಿ ಸಿದ್ಧತೆ ಮಾಡಿಕೊಂಡಿದ್ದು, ನಮ್ಮ “ಕೇಡರ್’ ಕೂಡ ಸಜ್ಜಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos