ಬಿಜೆಪಿ ಮಾಧ್ಯಮಗಳನ್ನು ಬಹಿಷ್ಕರಿಸಿ: ತೇಜಸ್ವಿ ಯಾದವ್

ಬಿಜೆಪಿ ಮಾಧ್ಯಮಗಳನ್ನು ಬಹಿಷ್ಕರಿಸಿ: ತೇಜಸ್ವಿ ಯಾದವ್

ಪಾಟ್ನಾ, ಮಾ.12, ನ್ಯೂಸ್ ಎಕ್ಸ್ ಪ್ರೆಸ್:  ಬಿಜೆಪಿ ಬೆಂಬಲಿತ ನ್ಯೂಸ್ ಚ್ಯಾನೆಲ್‍ಗಳನ್ನು ಬಹಿಷ್ಕರಿಸುವಂತೆ ಬಿಹಾರದ ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಎಲ್ಲ ವಿಪಕ್ಷಗಳಿಗೆ ಪತ್ರ ಬರೆದು ಹಸಿವು, ನಿರುದ್ಯೋಗ, ರೈತ, ಶಿಕ್ಷಣ, ಆರೋಗ್ಯ, ರಕ್ಷಣೆ, ಸಮಾಜಿಕ ನ್ಯಾಯ ದಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೇ ಬಿಜೆಪಿ ಕಛೇರಿಯಿಂದ ನಿರ್ಧಾರ ಆಗುತ್ತಿರುವ ಅಜೆಂಡಾಗಳ ಪರವಾಗಿ ಕಾರ್ಯ ನಿರ್ವಹಣೆ ಮಾಡುತ್ತವೆ ಎಂದು ಆರೋಪಿಸಿದ್ದಾರೆ

ಎಲ್ಲ ವಿಪಕ್ಷಗಳಿಗೆ ಪತ್ರ ಬರೆದ ತೇಜಸ್ವಿ ಯಾದವ್ ಈ ಮೂಲಕ ಭಾರತೀಯ ಮೀಡಿಯಾದ ಇನ್ನೂಂದು ಕರಾಳ ಮುಖವನ್ನು ಕಳಚಿದ್ದಾರೆಂದು ಹೇಳಲಾಗುತ್ತಿದೆ.

ತೇಜಸ್ವಿ ಯಾದವ್‍ರ ತಂದೆ ಆರ್‍ಜೆಡಿ ನಾಯಕ ಲಾಲುಪ್ರಸಾದ್ ಯಾದವ್‍ರು ಕೂಡ ತೇಜಸ್ವಿಯ ಕರೆಗೆ ಬೆಂಬಲ ಸೂಚಿಸಿದ್ದಾರೆ. ಮೋದಿ ಮಾಧ್ಯಮಗಳನ್ನು ಬಹಿಷ್ಕರಿಸಿರಿ ಎಂದು ಲಾಲು ಪ್ರಸಾದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತೇಜಸ್ವಿ ಯಾದವ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಎಸ್ಪಿ ನಾಯಕಿ ಮಾಯಾವತಿ, ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು, ಜೆಡಿಎಸ್ ನ ಮಾಜಿ ಪ್ರಧಾನಿ ದೇವೇಗೌಡ, ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಇವರುಗಳಿಗೆ ಬರೆದ ಪ್ರತದ ಪ್ರತಿಗಳನ್ನು ತಮ್ಮ ಟ್ವಿಟರ್ ಹಾಕಿದ್ದಾರೆ.

ಎಲ್ಲ ಪ್ರತಿಪಕ್ಷಗಳನ್ನು ಕೆಳಮಟ್ಟದಲ್ಲಿ ತೋರಿಸುವ ರೀತಿಯಲ್ಲಿ ಪ್ರತಿ ಸಂಜೆ ವೇಳೆ ಡಿಬೇಟ್ ಹೆಸರಿನಲ್ಲಿ ಚರ್ಚೆ ಕಾರ್ಯಕ್ರಮಗಳನ್ನು ಬಿಜೆಪಿ ಬೆಂಬಿತ ಚ್ಯಾನೆಲ್‍ಗಳು ಮಾಡುತ್ತಿವೆ. ಇದು ಎಲ್ಲರಿಗೂ ಗೊತ್ತಿರುವ ನಗ್ನ ಸತ್ಯವಾಗಿದೆ ಎಂದು ತೇಜಸ್ವಿ ಯಾದವ್ ಮಾಧ್ಯಮಗಳ ಮೇಲೆ ಆರೋಪ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos