ಬಿಜೆಪಿ ಬೆಂಬಲಿಸಲಿರುವ ಕ್ರಿಕೆಟಿಗ ಜಡೇಜಾ

ಬಿಜೆಪಿ ಬೆಂಬಲಿಸಲಿರುವ ಕ್ರಿಕೆಟಿಗ ಜಡೇಜಾ

ನವದೆಹಲಿ, ಏ. 16, ನ್ಯೂಸ್ ಎಕ್ಸ್ ಪ್ರೆಸ್ : ರವೀಂದ್ರ ಜಡೇಜಾ ಅವರ ಪತ್ನಿ ಕಳೆದ ತಿಂಗಳು ಬಿಜೆಪಿ ಸೇರಿದ್ದರೆ ಅವರ ತಂದೆ ಹಾಗೂ ಸೋದರಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ಹಾಗಾದರೆ ರವೀಂದ್ರ ಜಡೇಜಾ ಯಾವ ಪಕ್ಷವನ್ನು ಬೆಂಬಲಿಸಲಿದ್ದಾರೆಂಬ ಕುತೂಹಲ ಎಲ್ಲಡೆ ಇರುವಂತೆಯೇ ತಾವು ತಮ್ಮ ಪತ್ನಿ ಸೇರಿರುವ ಬಿಜೆಪಿಯನ್ನೇ ಬೆಂಬಲಿಸುವುದಾಗಿ ಅವರು ಸ್ಪಷ್ಟ ಪಡಿಸಿದ್ದಾರೆ.

ತಮ್ಮ ತಂದೆ ಹಾಗೂ ಸೋದರಿ ಕಾಂಗ್ರೆಸ್ ಪಕ್ಷ ಸೇರಿದ ಬೆನ್ನಲ್ಲೇ, ಎಲ್ಲರ ಮನಸ್ಸಿನಲ್ಲಿರುವ ಗೊಂದಲ ನಿವಾರಿಸುವ ಸಲುವಾಗಿ ಟ್ವೀಟ್ ಮಾಡಿದ ಜಡೇಜಾ ತಾವು ಬಿಜೆಪಿ ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ.

ಜಡೇಜಾ ಅವರ ಪತ್ನಿ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಗುಜರಾತ್ ನಲ್ಲಿ ಕರ್ನಿ ಸೇನಾದ ಮಹಿಳಾ ಘಟಕದ ಅಧ್ಯಕ್ಷೆಯಾಗಿ ನೇಮಿಸಲ್ಪಟ್ಟಿದ್ದರು. ಆಗ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಅವರು ಹೇಳಿಕೊಂಡಿದ್ದರೂ ಲೋಕಸಭಾ ಚುನಾವಣೆ ಘೋಷಣೆಯಾಗುವುದಕ್ಕಿಂತ ಮುನ್ನ ಬಿಜೆಪಿ ಸೇರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos