ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಬೆಂಗಳೂರು, ಸೆ. 15: ಇಂದಿರಾ ಭವನ ಸಭಾಂಗಣದಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಮಾಜಿ ಪಾಲಿಕೆ ಸದಸ್ಯರು, ಮುಖಂಡರು ಮತ್ತು ಜೆಡಿಎಸ್ ಮುಖಂಡರುಗಳು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಮತ್ತು ಸಾರಿಗೆ, ಮುಜಾರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರು ಸಮ್ಮುಖದಲ್ಲಿ ಸೇರ್ಪಡೆಯಾದರು.

ಜೆಡಿಎಸ್ ಪಕ್ಷದ ನಾಯಕರಾದ ಕಬ್ಬಡಿ ಬಾಬು ಮತ್ತು ಅವರ ಪುತ್ರ ಪವನ್ ಹಾಗೂ ಉಪಮಹಾಪೌರರಾದ ಎಲ್.ಶ್ರೀನಿವಾಸ್. ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಶೋಭಾ ಅಂಜನಪ್ಪ, ಸುರೇಶ್,ಹೆಚ್.ನಾರಾಯಣ್, ಎಲ್.ಗೋವಿಂದರಾಜು, ಸುಪ್ರಿಯ ಶೇಖರ್, ವೆಂಕಟಸ್ವಾಮಿನಾಯ್ಡು, ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಪಾಲಿಕೆ ಸದಸ್ಯರುಗಳಾದ ವಿ.ಬಾಲಕೃಷ್ಣ, ಸುಗುಣ ಬಾಲಕೃಷ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀ ಸುರೇಶ್ ಬಿಜೆಪಿ ಮುಖಂಡ ರಂಗದಾಮಯ್ಯ ಮತ್ತು ಚಲನಚಿತ್ರ ನಟ ರವಿಕಿರಣ್ ರವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರುಗಳು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

 ಡಿ.ಕೆ.ಶಿವಕುಮಾರ್ ಅವರು ಮಾತನಾಡಿ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡುವ ಪೀಠಿಕೆ ಆರಂಭವಾಗಿದೆ.ಸೂರ್ಯ ಉದಯಿಸಿದ ನಂತರ ಮುಳುಗಲೆಬೇಕು, ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಮುಖ್ಯ. ಕಾಂಗ್ರೆಸ್ ಪಕ್ಷ 140ಸೀಟು ಗೆಲ್ಲುತ್ತೇವೆ ಎಂದು ಹೇಳಿದ್ದೇ, ಮುಂದಿನ ಬಾರಿ ಪದ್ಮನಾಭನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ.
ಭಾರತಜೋಡೋ ಕಛೇರಿಯಲ್ಲಿ ಎಲ್ಲರ ಮನಸ್ಸು ಒಂದಾಗುತ್ತಿದೆ.ಬಿಬಿಎಂಪಿ ಚುನಾವಣೆಯಲ್ಲಿ 8ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರುಗಳನ್ನು ಗೆಲ್ಲಿಸುವ ಗುರಿ ನಿಮ್ಮದು.ಬಿಜೆಪಿ ನಾಯಕರುಗಳಿಗೆ ಕಾರ್ಯಕರ್ತರು ಉತ್ತರ ನೀಡುತ್ತಾರೆ.

ರಾಮಲಿಂಗಾರೆಡ್ಡಿರವರು ಮಾತನಾಡಿ ಆರ್.ಆರ್.ನಗರ, ಕೆ.ಆರ್.ಪುರ, ಯಶವಂತಪುರ ಪದ್ಮನಾಭನಗರ ವಿಧಾನಸಭಾ ಹಲವಾರು ಪಾಲಿಕೆ ಸದಸ್ಯರುಗಳು, ಬಿಜೆಪಿ ಮುಖಂಡರುಗಳು ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿ ಸೇರ್ಪಡೆಯಾಗಿದ್ದಾರೆ.
ಜೆಡಿಎಸ್ ಮುಖಂಡ ಕಬ್ಬಡಿಬಾಬು ರವರು ಮಾತನಾಡಿ ಅಂತರಾಷ್ಟ್ರಿಯ ಕಬ್ಬಡಿ ಅಟಗಾರ ನಾನು .ಡಿ.ಕೆ.ಶಿವಕುಮಾರ್ ಅವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಮ್.ಎಲ್.ಸಿ ಮಾಡುತ್ತೇನೆ ನಿಮ್ಮ ಪಕ್ಷದ ಸಹಕಾರ ಹೇಳಿ ಎಂದು ಹೇಳಿದ್ದರು. ಡಿ.ಕೆ.ಶಿವಕುಮಾರ್ ರವರು ಸಂಘಟನಾ ಚತುರ, ಪ್ರತಿಯೊಬ್ಬ ಕಾರ್ಯಕರ್ತರನ್ನು ಗುರುತಿಸುತ್ತಾರೆ .ಪದ್ಮನಾಭನಗರ ವಿಧಾನಸಭಾಕ್ಷೇತ್ರ ಮತ್ತು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೇಬಲ್ ಸಂಸ್ಥೆ ಮತ್ತು ಕಬ್ಬಡಿ ಸಂಸ್ಥೆಯ ಸಹಕಾರದಿಂದ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಲಾಗುವುದು ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos