ಲೋಕಸಭಾ ಚುನಾವಣೆ: ಅಹಿಂದ ಓಲೈಕೆಗೆ ಬಿಜೆಪಿ ತಂತ್ರ

ಲೋಕಸಭಾ ಚುನಾವಣೆ: ಅಹಿಂದ ಓಲೈಕೆಗೆ ಬಿಜೆಪಿ ತಂತ್ರ

ಬೆಂಗಳೂರು: ಕೆಲವೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ
ಭರ್ಜರಿ ತಯಾರಿ ನಡೆಸಿರುವ ಬಿಜೆಪಿಗೆ ದಲಿತ ಮತಗಳು ಕೈ ತಪ್ಪು ಆತಂಕ ಮೂಡಿದೆ. ಅಹಿಂದ ಮತಗಳ ಓಲೈಕೆಗೆ
ಮುಂದಾಗಿರುವ ಪಕ್ಷ ಇದಕ್ಕಾಗಿ ಕಸರತ್ತು ನಡೆಸುತ್ತಿದೆ.

ಪರಿಶಿಷ್ಟ ಜಾತಿ
ಮತ್ತು ಪರಿಶಿಷ್ಟ ಜನರ ಹಿತ ಕಾಯುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂಬ ಆರೋಪ ಕೇಳಿ
ಬಂದಿತ್ತು. ಈ ಬೆನ್ನಲ್ಲೆ ಕೇಂದ್ರ ಸರ್ಕಾರ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿರುದ್ಧ
ದೌರ್ಜನ್ಯಗಳ ತಡೆಗಟ್ಟುವಿಕೆ ಕಾಯ್ದೆ ಜಾರಿಗೆ ತಂದಿದೆ. ಆದರೂ ಕೂಡ ದಲಿತ ಮತಗಳ ಓಲೈಕೆಯಲ್ಲಿ ಬಿಜೆಪಿ
ಹಿಂದುಳಿದಿದೆ ಎಂಬ ಮಾತು ಕೇಳಿ ಬಂದಿದೆ.

ರಾಜ್ಯದಲ್ಲೂ ಕೂಡ
ಅಹಿಂದ ಮತಗಳ ಓಲೈಕೆಯಲ್ಲಿ ಸೋತಿರುವ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಈ ಮತಗಳನ್ನು ಸೆಳೆಯುವತ್ತ
ತನ್ನ ದೃಷ್ಟಿಹರಿಸಿದೆ. ಈ ಹಿಂದೆ ಸ್ಲಂ ಮನೆಯಲ್ಲಿ ವಾಸ್ತವ್ಯ, ಪೌರಕಾರ್ಮಿಕರೊಂದಿಗೆ ಸಹ ಭೋಜನ, ದಲಿತ
ಮನೆಗೆ ಭೇಟಿ ಮಾಡುವ ಮೂಲಕ ಬಿಜೆಪಿ ನಾಯಕರು ಭಾರೀ ಸರ್ಕಸ್ ನಡೆಸಿದ್ದರು.

ಈಗ ಚುನಾವಣೆ ಮುಂದೆ
ದಲಿತ ಮತಗಳನ್ನು ಒಟ್ಟುಗೂಡಿಸುವ ಪ್ರಯತ್ನ ಶ್ರೀರಾಮಲು ಮೇಲೆ ಹಾಕಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಆ ಮೂಲಕ ಅಧಿಕ ಸ್ಥಾನ ಗೆಲ್ಲುವ ಲೆಕ್ಕಾಚಾರ ನಡೆಸಿದ್ದಾರೆ. ರಾಜ್ಯದ 28 ಕ್ಷೇತ್ರಗಳಲ್ಲಿ 7 ಮೀಸಲು
ಲೋಕಸಭಾ ಕ್ಷೇತ್ರ ವಿದೆ. ಈ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಮತಗಳನ್ನು ಸೆಳೆಯುವ ಪ್ರಯತ್ನಕ್ಕೆ
ಮುಂದಾಗಿದ್ದಾರೆ.

ವಿಜಯಪುರ (ಪ.ಜಾ),
ಬಳ್ಳಾರಿ(ಪ.ಪಂ), ಕಲ್ಬುರ್ಗಿ(ಪ.ಜಾ), ರಾಯಚೂರು(ಪ.ಪಂ), ಚಿತ್ರದುರ್ಗ (ಪ.ಜಾ), ಕೋಲಾರ(ಪ.ಜಾ), ಚಾಮರಾಜನಗರ(ಪ.ಜಾ)
ಕ್ಷೇತ್ರಗಳ ಉಸ್ತುವಾರಿ ಶ್ರೀರಾಮುಲುಗೆ ವಹಿಸಲಾಗಿದೆ.

ಇವರ ಜೊತೆ ಉಸ್ತುವಾರಿಗಳಾಗಿ
ಗೋವಿಂದ ಕಾರಜೋಳ,ಕೇಂದ್ರ ಸಚಿವ ರಮೇಶ್ ಜಿಗಜಿಣಗಿಗೂ ಜವಾಬ್ದಾರಿ ನೀಡಲಾಗಿದೆ. 7 ಕ್ಷೇತ್ರಗಳ ಪೈಕಿ
5 ಕ್ಷೇತ್ರಗಳಾದರೂ ಗೆಲ್ಲಬೇಕೆಂಬ ಬಿಜೆಪಿ ರಾಜಾಯಧ್ಯಕ್ಷರು ತಿಳಿಸಿದ್ದು ಇದಕ್ಕಾಗಿ ಈಗಾಗಲೇ ಕ್ಷೇತ್ರಗಳಲ್ಲಿ
ಸುತ್ತಾಟವನ್ನು ಶ್ರೀರಾಮುಲು ಆರಂಭಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos