ಬಿಸಿಲನಾಡಲ್ಲಿ ಕಪಿಲತೀರ್ಥದ ಕಲರವ

 ಬಿಸಿಲನಾಡಲ್ಲಿ ಕಪಿಲತೀರ್ಥದ ಕಲರವ

ಕೊಪ್ಪಳ, ಅ. 13 : ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ಜಲಪಾತಗಳ ಸಂಖ್ಯೆ ಹೆಚ್ಚು. ಜಲಪಾತಗಳನ್ನು ನೋಡಬೇಕೆಂದರೆ ಮಲೆನಾಡಿಗೆ ಹೋಗಬೇಕು. ಆದರೆ ಬಿಸಿಲನಾಡಲ್ಲಿ ಜಲಪಾತ ನೋಡಲು ಸಿಗುತ್ತೆ ಅಂದರೆ ಅಚ್ಚರಿ. ಆದರೂ ಇದು ಸತ್ಯ, ಕಲ್ಯಾಣ ಕರ್ನಾಟಕದಲ್ಲಿ ಇರುವ ಏಕೈಕ ಜಲಪಾತ ಕಪಿಲತೀರ್ಥದ ಕಲರವಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ.
ಹೌದು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಬೆಟ್ಟದ ಮೇಲೆ ಕಪೀಲತೀರ್ಥ ಜಲಪಾತ ಹರಿಯುತ್ತದೆ. ಇಂತಹದ್ದೊಂದು ಅಪರೂಪದ ಜಲಪಾತವನ್ನ ನೋಡಿದವರು ಅರೇ ಇದೇನಪ್ಪ ಬರದ ನಾಡಲ್ಲಿ ಜಲಪಾತ ಎಂದು ಅಚ್ಚರಿ ಪಡುತ್ತಾರೆ. ಸುತ್ತಲೂ ಹಚ್ಚ ಹಸುರಿನ ವನರಾಶಿ, ಮೈಗೆ ಸೋಕುವ ತಂಗಾಳಿ. ಅದರ ಮಧ್ಯೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯ ವೈಭವ ನೋಡುತ್ತಿದ್ದರೆ ಮನಸ್ಸಿಗೆ ಆನಂದ ಸಿಗುತ್ತೆ.

ಫ್ರೆಶ್ ನ್ಯೂಸ್

Latest Posts

Featured Videos