ವಿದೇಶಿ ಹುದ್ದೆ ಬಿಟ್ಟು ಆದಿವಾಸಿ ಮಕ್ಕಳಿಗೆ ಶಾಲೆ ತೆರೆದ ಐಐಟಿ ಪದವೀಧರ!

ವಿದೇಶಿ ಹುದ್ದೆ ಬಿಟ್ಟು ಆದಿವಾಸಿ ಮಕ್ಕಳಿಗೆ ಶಾಲೆ ತೆರೆದ ಐಐಟಿ ಪದವೀಧರ!

ಅಸ್ಸಾಂ, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಐಐಟಿ ಪದವಿ ಜೊತೆಗೆ ಕೈತುಂಬಾ ಸಂಬಳ ಬರುವ ಕೆಲಸ ಇದ್ದರೂ ಅದನ್ನು ಬಿಟ್ಟು ಪ್ರವಾಹ ಪೀಡಿತ ಪ್ರದೇಶದಲ್ಲಿ ಶಾಲೆ ನಿರ್ಮಿಸಿ ಅಲ್ಲಿನ ಅವಕಾಶವಂಚಿತ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಮೂಲಕ ಇಲ್ಲೊಬ್ಬರು ಮಾದರಿ ವ್ಯಕ್ತಿ ಎನಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಸತಾರಾ ಎಂಬಲ್ಲಿನ ಇಂಜಿನಿಯರ್ ಬಿಪಿನ್ ಧಾನೆ ಎಂಬ 29 ವರ್ಷದ ವ್ಯಕ್ತಿ ಇಂಥದ್ದೊಂದು ಸಾಧನೆ ಮಾಡಿದ್ದಾರೆ. ತಂದೆ-ತಾಯಿಯ ಕನಸಿನಂತೆ 2013ರಲ್ಲಿ ಐಐಟಿ ಖರಗ್‍ಪುರದಲ್ಲಿ ಪದವಿ ಪಡೆದ ಇವರು ಬಳಿಕ ಸಿಂಗಾಪುರದಲ್ಲಿನ ಕಂಪನಿಯಲ್ಲಿ ಒಳ್ಳೆಯ ಉದ್ಯೋಗವನ್ನೂ ಪಡೆದಿದ್ದರು. ಆದರೆ ಆ ಕೆಲಸದಲ್ಲಿ ನೆಮ್ಮದಿ ಇಲ್ಲ ಎನಿಸಿದ ಬಿಪಿನ್, ಎರಡೇ ವರ್ಷದಲ್ಲಿ ಅದನ್ನು ಬಿಟ್ಟರು. ಬಳಿಕ ಅಸ್ಸಾಮ್‍ ನಲ್ಲಿನ ಪ್ರವಾಹಪೀಡಿತ ದ್ವೀಪ ಜಿಲ್ಲೆ ಮಜೂಲಿಯಲ್ಲಿ ಅಲ್ಲಿನ ಮಕ್ಕಳಿಗೆಂದೇ 2017ರಲ್ಲಿ ದ ಹಮ್ಮಿಂಗ್‍ಬರ್ಡ್ ಸ್ಕೂಲ್ ಆರಂಭಿಸಿದರು. ತಮ್ಮ ಉಳಿತಾಯದ ಹಣವನ್ನು ವಿನಿಯೋಗಿಸಿ ಆರಂಭಿಸಿದ ಇವರ ಪ್ರಯತ್ನಕ್ಕೆ ಅಲ್ಲಿನ ಜನ ಜಾಗ, ಬಿದಿರು, ಮರ ಇತ್ಯಾದಿ ಎಲ್ಲ ಅಗತ್ಯ ವಸ್ತುಗಳನ್ನು ನೀಡಿ ಸಹಕರಿಸಿದರು. ನಂತರ ಅನೇಕ ಎನ್‍ಜಿಒಗಳು ನೆರವಾಗಿದ್ದು, ಅಲ್ಲೀಗ 20 ಬೋಧಕರು, 10 ಬೋಧಕೇತರ ಸಿಬ್ಬಂದಿ ಇದ್ದು, 240 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos