ಬಿಕೋ ಎನ್ನುತ್ತಿದೆ ಪೇಜಾವರ ಮಠ

ಬಿಕೋ ಎನ್ನುತ್ತಿದೆ ಪೇಜಾವರ ಮಠ

ಉಡುಪಿ, ಜ. 01: ಪೇಜಾವರ ಶ್ರೀಗಳು ಅಗಲಿ ಎರಡು ದಿನಗಳು ಸರಿದಿವೆ. ಅವರಿಲ್ಲದ ಪೇಜಾವರ ಮಠ ಅಕ್ಷರಶಃ ಬಿಕೋ ಅನ್ನುತ್ತಿದೆ. ಸದಾ ಚಟುವಟಿಕೆಯಿಂದ ಕೂಡಿರುತ್ತಿದ್ದ ಮಠದಲ್ಲಿ ಪೇಜಾವರರ ಇರುವಿಕೆಯಿಲ್ಲದೇ ಮೌನ ಆವರಿಸಿದೆ.

ಎಂಬತ್ತೊಂಬತ್ತರ ಹರೆಯದಲ್ಲೂ ಪಾದರಸದಂತೆ ಚುರುಕಾಗಿದ್ದ ಶ್ರೀಗಳು ಉಡುಪಿಯ ಪೇಜಾವರ ಮಠದಲ್ಲಿ ಮಕ್ಕಳಿಗೆ ನಿತ್ಯ ಪಾಠ ಮಾಡುತ್ತಿದ್ದರು. ದಿನವೂ ಅಲ್ಲಲ್ಲಿ ಪ್ರಯಾಣಿಸುತ್ತಿದ್ದರು. ಮತ್ತೆ ಮಠಕ್ಕೆ ವಾಪಸ್ಸಾಗಿ ಭಕ್ತರ ಜೊತೆ ಬೆರೆಯುತ್ತಿದ್ದರು. ಮಠದೊಳಗೆ ಪೇಜಾವರ ಶ್ರೀಗಳು ಎಲ್ಲಿಗೇ ಪ್ರಯಾಣಿಸಲಿ, ಏನೇ ಕಾರ್ಯಕ್ರಮ‌ ಇಟ್ಟುಕೊಂಡಿರಲಿ, ಮಕ್ಕಳಿಗೆ ನಿತ್ಯದ ಪಾಠ ಮಾತ್ರ ತಪ್ಪಿಸುತ್ತಿರಲಿಲ್ಲ. ಕೆಲವು ಕಡೆಗಳಿಗೆ ಮಕ್ಕಳನ್ನು ಕಟ್ಟಿಕೊಂಡೇ ಹೋಗುತ್ತಿದ್ದರು. ಮಕ್ಕಳಿಗೆ ನಿತ್ಯ ತಾವೇ ಪಾಠ ಮಾಡಿದರೆ ಮಾತ್ರ ಅವರಿಗೆ ನೆಮ್ಮದಿ. ಮಕ್ಕಳೀಗ ಪೇಜಾವರ ಮಠದಲ್ಲಿ ಗುರುಗಳನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos