ಚಪ್ಪಲಿ ಹಾಕಿ ಬೈಕ್  ಓಡ್ಸಿದ್ರೆ ದಂಡ!

ಚಪ್ಪಲಿ ಹಾಕಿ ಬೈಕ್  ಓಡ್ಸಿದ್ರೆ ದಂಡ!

ಬೆಂಗಳೂರು, ಸೆ. 11: ಈಗಾಗಲೇ ಜಾರಿಯಲ್ಲಿರುವ ನೂತನ ಟ್ರಾಫಿಕ್ ರೂಲ್ಸ್ ನಿಂದಾಗಿ ವಾಹನ ಸವಾರರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿರುವ ಸಂಚಾರಿ ಪೋಲಿಸರು ಮತ್ತೊಂದು ಶಾಕ್ ನೀಡಲು ಮುಂದಾಗಿದ್ದಾರೆ.

ಸವಾರರು ಸ್ಲಿಪ್ಪರ್ ಹವಾಯಿ ಚಪ್ಪಲಿ‌ ಹಾಕಿಕೊಂಡು ಗೇರ್ ಹೊಂದಿರುವ‌ ದ್ವಿಚಕ್ರ ವಾಹನ ಚಲಾಯಿಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಒಂದು ಸಾವಿರ ರೂ. ದಂಡ ಪಾವತಿಸ ಬೇಕಿದೆ.

ತಪ್ಪುಮರುಕಳಿಸಿದರೆ  ಹದಿನೈದು ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸ ಬೇಕಾಗುತ್ತದೆ.

ಸ್ಲಿಪ್ಪರ್, ಹವಾಯಿ ಚಪ್ಪಲಿ ಹಾಕಿದರೆ ದ್ವಿಚಕ್ರ ವಾಹನದ ಗೇರ್ ಬದಲಾಯಿಸಲು, ಪಾರ್ಕಿಂಗ್ ನಿಂದ ವಾಹನ ತೆಗೆಯುವಾಗ ಸಮಸ್ಯೆ ಎದುರಾಗಲಿದೆ. ಜೊತೆಗೆ ಅಪಘಾತ ಸಂಭವಿಸಿದಾಗ ಕಾಲಿಗೆ ಗಾಯಗಳಾಗುವ ಸಾದ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸವಾರರು ಶೂ ಧರಿಸಿ ವಾಹನ ಚಲಾಯಿಸದರೆ ಒಳ್ಳೆಯದು ಎಂಬುದು ನಿಯಮದ ಉದ್ದೇಶವಾಗಿದೆ.1988 ಮೋಟಾರು ವಾಹನ ಕಾಯ್ದೆಯಲ್ಲೇಉಲ್ಲೇಖಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos