ಅನಗತ್ಯ ಸಂಚರಿಸುತ್ತಿರುವವರ ಬೈಕ ವಶ

ಅನಗತ್ಯ ಸಂಚರಿಸುತ್ತಿರುವವರ ಬೈಕ ವಶ

ಜಮಖಂಡಿ, ಏ. 01: ಉಪಮುಖ್ಯಮಂತ್ರಿ ಬಂದು ಹೋದ ನಂತರ ರಸ್ತೆಗಿಳಿದದ ಸಿಪಿಐ ಡಿ.ಕೆ.ಪಾಟೀಲ್ ಬೈಕ ಸಿಜ್ ಮಾಡುವ ಮೂಲಕ ಜನದಟ್ಟನೆಗೆ ಬ್ರೆಕ್ ಹಾಕಲಾಗಿದೆ. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸಂಚರಿಸಿ ಸೇವೆ ಮಾಡುತ್ತಿರುವ ಪೊಲೀಸರಿಗೆ ಸಾರ್ವಜನಿಕರಿಗೆ ತೀಳಿ ಹೇಳಬೇಕು ಎಂಬ  ಮಾಹಿತಿ ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದ್ದರೂ, ತಾಲ್ಲೂಕಿನಲ್ಲಿ ಪೊಲೀಸರ ಕಣ್ತಪ್ಪಿಸಿ ಅನಗತ್ಯವಾಗಿ ಕೆಲವು ವಾಹನ ಸವಾರರು ತಿರುಗುತ್ತಿದ್ದಾರೆ. ಇಂಥ ವಾಹನ ಸವಾರರ ವಿರುದ್ಧ ಪೊಲೀಸರು ಎರಡು ದಿನಗಳಲ್ಲಿ 67 ಬೈಕ್, ಎರಡು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

ಲಾಕ್‌ಡೌನ್ ಘೋಷಣೆ ಇದ್ದರೂ ಅತ್ಯಗತ್ಯ ವಸ್ತುಗಳಾದ ತರಕಾರಿ, ದಿನಸಿ, ಹಾಲು, ಔಷಧ, ಪತ್ರಿಕೆ ಖರೀದಿಸಲು ಸಾರ್ವಜನಿಕರು ನಿಗದಿತ ವೇಳೆಯಲ್ಲಿ ಹೊರಬರಲು ಅವಕಾಶ ಕಲ್ಪಿಸಿದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ.

ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಕೆಲವರು ಅನಗತ್ಯವಾಗಿ ನಗರದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದಾರೆ, ಇಂಥವರನ್ನು ಪೊಲೀಸರು ತಡೆದು ಲಾಠಿ ರುಚಿ ತೋರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ.

ಜಮಖಂಡಿ ತಾಲ್ಲೂಕಿನ ಸಿಪಿಐ ಡಿ.ಕೆ.ಪಾಟೀಲ್ ರಸ್ತೆಗಿಳಿದು 40 ಬೈಕ್, ಎರಡು ಕಾರು, ಗ್ರಾಮೀಣ ಠಾಣೆಯ ಪಿಎಸ್ ಐ ಬಸವರಾಜ ಅವಟಿ 20 ಬೈಕ್, ಸಾವಳಗಿ ಪಿಎಸ್ ಐ ತಳಕೇರಿ 7 ಬೈಕ್ ಒಟ್ಟು 67 ಬೈಕ ವಶಪಡಿಸಿಕೊಂಡು, ಸಾರ್ವಜನಿಕರ ಸಲುವಾಗಿ ಬಿದಿಯಲ್ಲಿ ನಿಂತು ಪೊಲೀಸ್ ಇಲಾಖೆ ಕಾರ್ಯನಿರ್ವಹಿಸುತ್ತಿದೆ, ಇದನ್ನು ಸಾರ್ವಜನಿಕರು ಅರಿತುಕೊಳ್ಳಬೇಕು, ಅನಗತ್ಯವಾಗಿ ಹೊರಗಡೆ ಬರದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ ಎನ್ನುತ್ತಾರೆ ಸಿಪಿಐ ಡಿ.ಕೆ.ಪಾಟೀಲ್.

ಫ್ರೆಶ್ ನ್ಯೂಸ್

Latest Posts

Featured Videos