ಬೈಕ್ನಲ್ಲಿ ಸುತ್ತಿ ಜನರ ನಾಡಿ ಮಿಡಿತ ಹಿರಿಯಲು ಹೊರಟ ಶಾಸಕ ಡಿ.ಎಸ್.ಹುಲಿಗೇರಿ

ಬೈಕ್ನಲ್ಲಿ ಸುತ್ತಿ ಜನರ ನಾಡಿ ಮಿಡಿತ ಹಿರಿಯಲು ಹೊರಟ ಶಾಸಕ ಡಿ.ಎಸ್.ಹುಲಿಗೇರಿ

ರಾಯಚೂರು: ಬೈಕ್ ಓಡಿಸಿಕೊಂಡು ಜನರ ಸಮಸ್ಯೆಗಳನ್ನು ಆಲಿಸುವುದರ ಮೂಲಕ ಇದೀಗ ಕಾಂಗ್ರೆಸ್ ಶಾಸಕರೊಬ್ಬರು ಜನರ ಮೆಚ್ಚುಗೆ ಪಾತ್ರರಾಗಿದ್ದಾರೆ.

ಲಿಂಗಸುಗೂರು ಕ್ಷೇತ್ರದ ಶಾಸಕ ಡಿ.ಎಸ್ ಹೂಲಿಗೇರಿ ಅವರು, ಪಟ್ಟಣದಲ್ಲಿ ಬೈಕ್ ರೈಡ್ ಮಾಡಿಕೊಂಡೇ ಗಲ್ಲಿ ಗಲ್ಲಿಗಳಲ್ಲಿ ತಿರುಗಾಡಿ ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆಗಳನ್ನ ಪರಿಶೀಲಿಸಿದಲ್ಲದೇ ಅಲ್ಲಿನ ಜನರ ಜೊತೆ ಮಾತನಾಡಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದು ಸಮಸ್ಯೆಗಳನ್ನು ಬಗೆಹರಿಸುವಂತೆ ಭರವಸೆ ನೀಡಿದ್ದಾರೆ.

ಅಲ್ಲದೇ ಸಿಸಿ ರಸ್ತೆಗಳು (ಕಾಂಕ್ರೀಟ್ ರೋಡ್) ಇಲ್ಲದ ಬಡಾವಣೆಗಳನ್ನ ಗುರುತಿಸಿ ಮಾಹಿತಿ ಕೊಡುವಂತೆ ಶಾಸಕ ಹೂಲಿಗೇರಿ ಅವರು ಪುರಸಭೆ ಮುಖ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾಂಗ್ರೆಸ್ ಶಾಸಕ ಡಿ.ಎಸ್ ಹೂಲಿಗೇರಿ ಅವರು ಬೈಕ್ ರೈಡ್ ಮಾಡಿ ಪಟ್ಟಣದಲ್ಲಿ ಓಡಾಡಿರೋ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಸಾಕಷ್ಟು ಸಾಮಾಜಿಕ ಜಾಲತಾಣ ಬಳಕೆದಾರರಿಂದ ಪ್ರಶಂಶೆ ವ್ಯಕ್ತವಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos