‘ಹಸು’ ಕೂರಿಸಿ ಪಾಕ್ ನಲ್ಲಿ ಬೈಕ್ ಡ್ರೈವ್!

‘ಹಸು’ ಕೂರಿಸಿ ಪಾಕ್ ನಲ್ಲಿ ಬೈಕ್  ಡ್ರೈವ್!

ಪಾಕಿಸ್ತಾನ, ಮೇ. 28, ನ್ಯೂಸ್‍ ಎಕ್ಸ್ ಪ್ರೆಸ್‍: ಬೈಕ್​​ ಮೇಲೆ ನಾಯಿ, ಬೆಕ್ಕು, ಕೂರಿಸಿಕೊಂಡು ಹೋಗೋವುದನ್ನು ನೋಡಿದ್ದೇವೆ.  ಆದರೆ, ಟ್ರಕ್ ಅಥವಾ ಟೆಂಪೋ ಬಳಿಸಿಕೊಂಡು ಹಸು ಅಥವಾ ಎಮ್ಮೆಕೊಂಡೊಯ್ಯಲು ಉಪಯೋಗ ಮಾಡುತ್ತಾರೆ.  ಆದರೆ, ವ್ಯಕ್ತಿ ಬೈಕ್​ನಲ್ಲಿ ಹಸುವನ್ನು  ಕೂರಿಸಿಕೊಂಡು ಡ್ರೈವ್​ ಮಾಡಿರರುವ ಘಟನೆ  ಶತೃರಾಷ್ಟ್ರ ಪಾಕಿಸ್ತಾನದಲ್ಲಿ ನಡೆದಿದೆ.

ಬೈಕ್​ನಲ್ಲಿ ಹಸುವನ್ನು  ಕೂರಿಸಿಕೊಂಡು ಡ್ರೈವ್​ ಮಾಡಿರುವ ರಸ್ತೆಯಲ್ಲಿ ಹೋಗ್ತಿದ್ದ ಇತರೆ ವಾಹನ ಸವಾರರು ಇದನ್ನ ಮೊಬೈಲ್​​​ನಲ್ಲಿ ಸೆರೆಹಿಡಿದಿದದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಬೈಕ್​ ಮೇಲೆ ಕುಳಿತಿದ್ದ ಹಸು ಕೂಲ್​ ಆಗಿಯೇ ಇತ್ತು. ಅತ್ತಿತ್ತ ಅಲುಗಾಡದೇ ಆರಾಮವಾಗಿ ಕುಳಿತಂತೆ ಕಾಣ್ತಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ವಿಡಿಯೋ ಹಾಸ್ಯಾಸ್ಪದವಾಗಿದೆ ಅಂದ್ರೆ, ಇನ್ನೂ ಕೆಲವರು ಇದು ಪ್ರಾಣಿ ಹಿಂಸೆ ಅಂತ ಕರೆದಿದ್ದಾರೆ. ರಸ್ತೆ ಸಂಚಾರ ನಿಮಯ ಹಾಗೂ ಪ್ರಾಣಿ ಸಂರಕ್ಷಣಾ ನಿಯಮ ಎರಡಕ್ಕೂ ಇದು ವಿರುದ್ಧ ಎಂದು ಕಮೆಂಟ್​ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos