ಮಗನಿಂದಲೇ ತಾಯಿಯ ಕೊಲೆಗೆ ಬಿಗ್‌ ಟ್ವಿಸ್ಟ್

ಮಗನಿಂದಲೇ ತಾಯಿಯ ಕೊಲೆಗೆ ಬಿಗ್‌ ಟ್ವಿಸ್ಟ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಗನಿಂದಲೇ ತಾಯಿ ಕೊಲೆ ಪ್ರಕರಣಕ್ಕೆ ಬಿಗ್  ಟ್ವಿಸ್ಟ್ ಸಿಕ್ಕಿದ್ದು ತನಿಖೆ ಮೇಲೆ ಸ್ಫೋಟಕ ಮಾಹಿತಿ ಬಯಲಾಗಿದೆ ಕೊಲೆ ಮಾಡಿದ್ದು ಮಗ ಅಲ್ಲ ಅಪ್ಪ ಎಂಬುದು ವಿಚಾರಣೆ ಮೇಲೆ ಗೊತ್ತಾಗಿದೆ ಬೆಂಗಳೂರಿನ ಕೆಆರ್ ಪುರಂ ನ ಭೀಮಯ್ಯ ಲೇಔಟ್ ನಲ್ಲಿ ಈ ಘಟನೆ ನಡೆದಿದೆ.

ಫೆಬ್ರವರಿ 2ರಂದು ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು. ಕ್ಷುಲ್ಲಕ ವಿಚಾರಕ್ಕೆ ತಾಯಿಯೊಂದಿಗೆ ಜಗಳವಾಡಿದ ಮಗ ರಾಡಿನಿಂದ ಹೊಡೆದು ಕೊಲೆ ಮಾಡಿದ್ದ. ಕೊಲೆಯ ತನಿಖೆ ನಡೆಸಿದ ಪೊಲೀಸರಿಗೆ ಮತ್ತೋರ್ವ ಕೊಲೆ ಆರೋಪಿ ಇರುವುದು ಬಯಲಾಗಿದೆ. ಕೊಲೆಗೆ ಬಳಸಲಾಗಿದ್ದ ರಾಡ್ ಮೇಲೆ 2 ರೀತಿಯ ಫಿಂಗರ್ ಪ್ರಿಂಟ್​ಗಳು ಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು.

ಆಗ ರಾಡ್ ನ ಎಫ್​ಎಸ್​ಎಲ್​ಗೆ ಕಳುಹಿಸಿದಾಗ ರಾಡ್​ ಮೇಲೆ ಇರುವುದು ಮಗ ಹಾಗೂ ತಂದೆಯ ಫಿಂಗರ್ ಪ್ರಿಂಟ್ ಎಂಬುವುದು ಬಯಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಕೊಲೆಯಾದ ನೇತ್ರಾಳ ಗಂಡ ಚಂದ್ರಪ್ಪನನ್ನು ಕೆ.ಆರ್. ಪುರಂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಗ ಕೊಲೆಯ ಸತ್ಯ ಬಯಲಾಗಿದೆ.

ವಿಚಾರಣೆ ಮಾಡಿದಾಗ ಆರೋಪಿ ಕೊಲೆಗೆ ನಿಖರ ಕಾರಣ ಬಾಯಿಬಿಟ್ಟಿದ್ದಾರೆ. ಕೊಲೆಯಾದ ನೇತ್ರಾಳಿಗೆ ಅಕ್ರಮ ಸಂಬಂಧದ ಜೊತೆಗೆ ಕುಡಿತದ ಚಟ ಇತ್ತು. ಕೆಲವೊಮ್ಮೆ ಎರಡು ಮೂರು ದಿನಗಳ ಕಾಲ ಮನೆಗೆ ಬರ್ತಾ ಇರಲಿಲ್ಲ. ನಾವು ಊಟ ಇಲ್ಲದೆ ಉಪವಾಸ ಇರ್ತಾ ಇದ್ವಿ, ಕೇಳಿದ್ರೆ ನಮ್ಮ ಮೇಲೆಯೇ ಬಾಯಿ ಮಾಡ್ತಾ ಇದ್ದಳು. ಹೀಗಾಗಿ ಮಗನ ಜೊತೆ ಸೇರಿ ಕೊಲೆ ಮಾಡಲು ನಿರ್ಧಾರ ಮಾಡಿದೆ ಎಂದು ಚಂದ್ರಪ್ಪ ಬಾಯ್ಬಿಟ್ಟಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos