ಬೆಂಗಳೂರು: ಇಂದು ರಾಜ್ಯದ ನಾಲ್ಕು ರಾಜ್ಯ ಸಭೆ ಸ್ಥಾನಗಳಿಗೆ ಮತದಾನ ನಡೆಯಲಿದ್ದು ಬಿಜೆಪಿಗೆ ಶಾಸಕ ಎಸ್ ಟಿ ಸೋಮಶೇಖರ್ ಶಾಕ್ ಕೊಟ್ಟಿದ್ದಾರೆ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿದ್ದು ಕಾಂಗ್ರೆಸ್ ಪರ ಚಲಾಯಿಸಿದ್ದಾರೆ ಈ ಮೂಲಕ ಬಿಜೆಪಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ.
ಬೇಡ ಬೇಡ ಮತದಾನಕ್ಕೂ ಮುಂದೆ ಮಾತನಾಡಿದ ಶಾಸಕ ಎಸ್ ಟಿ ಸೋಮಶೇಖರ್ ಅನುದಾನ ಕೊಟ್ಟವರಿಗೆ ಮೊದಲ ಪ್ರಶಸ್ತ್ಯ ವೋಟ್ ಕಳೆದ ಆರು ವರ್ಷಗಳಿಂದ ಇದೆಲ್ಲವನ್ನು ನೋಡುತ್ತಿದ್ದೇನೆ ಎಲ್ಲರೂ ಅನುದಾನ ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ.
ಹೊರತು ಯಾರೊಬ್ಬರು ಕ್ಷೇತ್ರಕ್ಕೆ ಅನುದಾನ ಕೊಟ್ಟಿಲ್ಲ ಹಾಗಾಗಿ ಈ ಬಾರಿ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಯಾರೇ ಆಗಲಿ ನನ್ನ ಕ್ಷೇತ್ರಕ್ಕೆ ಅನುದಾನ ಕೊಡುವುದಾಗಿ ಭರವಸೆ ಕೊಡ್ತಾರೋ ಅವರಿಗೆ ನನ್ನ ವೋಟು ಎಂದು ಮುಚ್ಚುಮರೆ ಇಲ್ಲದೆ ಮಾಧ್ಯಮದ ಮಿತ್ರರೊಂದಿಗೆ ಹೇಳಿದರು.