ನಂದಿನಿ ಹಾಲು ಗ್ರಾಹಕರಿಗೆ ಬಿಗ್ ಶಾಕ್

ನಂದಿನಿ ಹಾಲು ಗ್ರಾಹಕರಿಗೆ ಬಿಗ್ ಶಾಕ್

ಬೆಂಗಳೂರು, ಡಿ. 31: ಕಳೆದ 3 ವರ್ಷಗಳಿಂದ ಹಾಲಿನ ದರವನ್ನು ಏರಿಕೆ ಮಾಡಿಲ್ಲ. ಹೀಗಾಗಿ ಹಾಲಿನ ದರ ಏರಿಕೆ ಮಾಡುವಂತೆ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಗ್ರಾಹಕರಿಗೆ ಬಿಗ್ ಶಾಕ್ ಕಾದಿದ್ದು, ಸದ್ಯದಲ್ಲೇ ಹಾಲಿನ ದರ ಪ್ರತಿ ಲೀಟರ್ ಗೆ ರೂ.3 ಏರಿಕೆ ಆಗುವ ಸಾಧ್ಯತೆ ಇದೆ.

ಈಗಾಗಲೇ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಹಾಲಿನ ದರ ಏರಿಕೆಯ ಬಿಸಿ ಗ್ರಾಹಕರನ್ನು ತಟ್ಟಲಿದೆ. ಅದೂ ಪ್ರತಿ ಲೀಟರ್ ಗೆ ರೂ.3 ಏರಿಕೆಯ ಬಿಸಿ ಆಗಿದೆ.

ಈ ಕುರಿತಂತೆ ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಪಶು ಸಂಗೋಪನೆ, ಸಹಕಾರ ಇಲಾಖೆ ಮತ್ತು ಕೆಎಂಎಫ್ ಹಾಗೂ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos